

ಹಾವೇರಿ: ಚಲಿಸುತ್ತಿದ್ದ ಬೈಕ್ನಿಂದ ಬಿದ್ದು ಮಹಿಳೆ ಮೃತಪಟ್ಟ ಘಟನೆ ನಗರದ ಹಾನಗಲ್ಲ ರಸ್ತೆಯಲ್ಲಿ ನಡೆದಿದೆ.
ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ ಗ್ರಾಮದ ರತ್ನಮ್ಮ ಬಸವರಾಜ ಬೆನ್ನೂರ ಮೃತ ಮಹಿಳೆ.
ಇವರು ಬೈಕ್ ಮೇಲೆ ದೇವಿಹೊಸೂರ ಗ್ರಾಮದಿಂದ ಹಾವೇರಿಗೆ ಬರುತ್ತಿದ್ದ ಸಮಯದಲ್ಲಿ ದಾರಿ ಮಧ್ಯೆ ಬೈಕ್ ಸವಾರ ಹೊರಳಾಡಿಸಿದ್ದರಿಂದ ಕೆಳಗೆ ಬಿದ್ದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.