

ಹಾವೇರಿ: ಕೇಂದ್ರ ಹಣಕಾಸು ಸಚಿವೆ ನೀರ್ಮಲಾ ಸೀತಾರಾಮನ್ ಮತ್ತು ಪ್ರಿಯಾಂಕಾ ಗಾಂಧಿ ಅವರ ಚರ್ಚೆ ಕುರಿತ ಎಐ ವಿಡಿಯೋ ನೋಡಿದ ವ್ಯಕ್ತಿಯೊಬ್ಬ ಹೆಚ್ಚಿನ ಲಾಭಾಂಶ ಬರಲಿದೆ ಎಂದು ನಂಬಿ 22.87 ಲಕ್ಷ ರೂ. ಕಳೆದುಕೊಂಡ ಕುರಿತು ಇಲ್ಲಿಯ ಸೈಬರ್ ಕೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಥೇನ್ಸ್ ಎಂಬುವರು ಮೋಸ ಹೋಗಿರುವುದು.
ಇವರು ಫೆಸ್ಬುಕ್ನಲ್ಲಿ ಕೇಂದ್ರ ಹಣಕಾಸು ಸಚಿವೆ ನೀರ್ಮಲಾ ಸೀತಾರಾಮ್ ಮತ್ತು ಪ್ರಿಯಾಂಕಾ ಗಾಂಧಿ ಅವರ ಚರ್ಚೆಯಲ್ಲಿ 22 ಸಾವಿರ ರೂ. ಇನ್ವೆಸ್ಟ್ ಮಾಡಿದರೆ ತಿಂಗಳಿಗೆ 25 ಲಕ್ಷ ರೂ. ಲಾಭಾಂಶ ಬರಲಿದೆ ಎಂಬ ಸಂಭಾಷಣೆ ನೋಡಿದ್ದಾರೆ. ಅದರ ಲಿಂಕ್ ಮೇಲೆ ಕ್ಲಿಕ್ ಮಾಡಿ ರಜಿಸ್ಟರ್ ಮಾಡಿಕೊಂಡಿದ್ದಾರೆ. ನಂತರ ಅದರ ಮೂಲಕ ಬಿಎಕ್ಸ್ಬಿ ಮಾರ್ಕೆಟ್ ಖಾತೆಗೆ 22.87 ಲಕ್ಷ ರೂ. ಹಾಕಿ ಮೋಸ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.