ಯುವಜನತೆಗೆ ಸಹಕಾರಿ ರಂಗದ ಅರಿವು ಮೂಡಿಸಿ cooperative sector

ಸವಣೂರ ಪಟ್ಟಣದ ಡಾ. ವಿ.ಕೃ. ಗೋಕಾಕ ಸಭಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ cooperative sectorಸಮಾರಂಭದಲ್ಲಿ ತಾಲೂಕಿನ ಉತ್ತಮ ಹಾಲು ಉತ್ಪಾದಕರ ಸಂಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಸವಣೂರ ಪಟ್ಟಣದ ಡಾ. ವಿ.ಕೃ. ಗೋಕಾಕ ಸಭಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ cooperative sectorಸಮಾರಂಭದಲ್ಲಿ ತಾಲೂಕಿನ ಉತ್ತಮ ಹಾಲು ಉತ್ಪಾದಕರ ಸಂಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
Published on
ಸವಣೂರ: ಸಹಕಾರ ಸಂಕ್ಕೆ ಸರ್ವರೂ ಸಹಕಾರ ನೀಡಿದಲ್ಲಿ ಗ್ರಾಮ ಹಾಗೂ ರಾಷ್ಟ್ರ ಅಭಿವೃದ್ಧಿ ಹೊಂದುವಲ್ಲಿ ಸಂದೇಹವಿಲ್ಲ ಎಂದು ರಾಣೆಬೆನ್ನೂರ ಹಿರೇಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಡಾ. ವಿ.ಕೃ. ಗೋಕಾಕ ಸಭಾ ಭವನದಲ್ಲಿ ರಾಜ್ಯ ಸಹಕಾರ ಮಹಾ ಮಂಡಳ, ಜಿಲ್ಲಾ ಸಹಕಾರ ಯೂನಿಯನ್​, ಸಹಕಾರ ಇಲಾಖೆ, ಧಾರವಾಡ ಕೆಸಿಸಿ ಬ್ಯಾಂಕ್​, ಹಾವೆಮುಲ್​, ಜಿಲ್ಲಾ ಸೌಹಾರ್ದ ಸಹಕಾರಿಗಳು ಹಾಗೂ ತಾಲೂಕಿನ ವಿವಿಧ ಸಹಕಾರ ಸಂಗಳ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಹಕಾರದ ಧ್ವಜದಲ್ಲಿರುವ ಏಳು ಬಣ್ಣಗಳು ಮನುಷ್ಯನನ್ನು ಏಳು, ಎದ್ದೇಳು ಗುರಿ ಮುಟ್ಟುವವರಿಗೂ ನಿಲ್ಲದಿರುವ ಎಂಬ ಸಂದೇಶ ನೀಡುತ್ತವೆ. ಸಹಕಾರ ಸಪ್ತಾಹದ ಮೂಲಕ ಯುವ ಜನತೆಯಲ್ಲಿ cooperative sector ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ಯುವಕರು ಸಹಕಾರ ರಂಗವನ್ನು ಅರ್ಥೈಯಿಸಿಕೊಂಡು ಕೃಷಿಯಲ್ಲಿ ತೊಡಗಬೇಕು ಎಂದರು.
ರಾಜ್ಯ ಸಹಕಾರ ಮಹಾ ಮಂಡಳ ನಿರ್ದೇಶಕ ಬಸವರಾಜ ಅರಗೊಂಡ ಮಾತನಾಡಿ, ಜಾಗತೀಕರಣ, ಉದಾರೀಕರಣ ಹಾಗೂ ವ್ಯಾಪಾರೀಕರಣ ಮಧ್ಯೆ ಪೈಪೋಟಿಗಾಗಿ ಸಹಕಾರಿ ವ್ಯವಸ್ಥೆ ಬಲವರ್ಧನೆ ಕೈಗೊಳ್ಳುವುದು ಅವಶ್ಯವಾಗಿದೆ. ಗುಜರಾತ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಸಹಕಾರ ರಂಗ ಸರ್ಕಾರವನ್ನು ಆಳುತ್ತಿವೆ. ಖಾಸಗಿ ರಂಗದ ಹತೋಟಿಗಾಗಿ ಸಹಕಾರಿ ರಂಗದ ಅಭಿವೃದ್ಧಿಗೆ ಪಣ ತೋಡಬೇಕಿದೆ ಎಂದರು. 
ಸಾಹಿತಿ ಮಾರುತಿ ಶಿಡ್ಲಾಪೂರ ಉಪನ್ಯಾಸ ನೀಡಿದರು.
ಹಾವೆಮುಲ್​ ನಿರ್ದೇಶಕ ಶಶಿಧರ ಯಲಿಗಾರ ಅವರು ತಾಲೂಕಿನ ಉತ್ತಮ ಹಾಲು ಉತ್ಪಾದಕರ ಸಂಗಳ ಪದಾಧಿಕಾರಿಗಳನ್ನು ಸನ್ಮಾನಿಸಿದರು. ತಾಲೂಕು ಗ್ಯಾರಂಟಿ ಯೋಜನೆ ಅಧ್ಯ ಸುಭಾಸ ಮಜ್ಜಗಿ ಮಾತನಾಡಿದರು. ಧಾರವಾಡ ಕೆಸಿಸಿ ಬ್ಯಾಂಕ್​ ನಿರ್ದೇಶಕ ಸುಭಾಸ ಗಡೆಪ್ಪನವರ ಅಧ್ಯತೆ ವಹಿಸಿದ್ದರು. ಜಿಲ್ಲಾ ಸಹಕಾರ ಯೂನಿಯನ್​ ನಿರ್ದೇಶಕ ಧರಿಯಪ್ಪಗೌಡ ಪಾಟೀಲ ಧ್ವಜಾರೋಹಣ ನೆರವೇರಿಸಿದರು.
ಸಹಕಾರ ಸಂಗಳ ಸಹಾಯಕ ನಿಬಂಧಕ ಎಸ್​.ಜಿ. ಸುಣಗಾರ, ವಿವಿಧ ಸಹಕಾರ ಸಂಟನೆಗಳ ಪದಾಧಿಕಾರಿಗಳಾದ ಬಿ.ಎಂ.ಪಾಟೀಲ, ಶಂಕರಗೌಡ ಪಾಟೀಲ, ಶಿವಾನಂದ ರಾಮಗೇರಿ, ಬಸನಗೌಡ ಪಾಟೀಲ, ಪ್ರವಿಣ ಮಾಳಿಯವರ, ಸಿದ್ದಪ್ಪ ವಡವಿ, ಎಸ್​.ಜಿ. ಲಮಾಣಿ, ಈರಣ್ಣ ಮಾಸನಕಟ್ಟಿ, ಎನ್​.ಎಸ್​. ಪೂಜಾರ ಹಾಗೂ ಇತರರಿದ್ದರು. ಡಿ.ಕೆ. ಜಕಾತಿ, ಸಿ.ಎಂ. ಕುಂಬಾರ ಹಾಗೂ ಬಸವರಾಜ ಶೀಲವಂತರ ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net