

ಶಿಗ್ಗಾಂವ: ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ 90 ಸಾವಿರ ರೂ. ಮೌಲ್ಯದ ಎರಡು ಹಸುಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋದ ಘಟನೆ ತಾಲೂಕಿನ ಅತ್ತಿಗೇರಿ ಗ್ರಾಮದಲ್ಲಿ ನಡೆದಿದೆ.
ಶಂಕ್ರಪ್ಪ ಭರಮಪ್ಪ ಮಡಿವಾಳರ (47) ಎಂಬುವರ ಆಕಳು ಕಳ್ಳತನ ಆಗಿರುವುದು.
ಇವರು ಮನೆ ಪಕ್ಕದ ದನದ ಕೊಟ್ಟಿಗೆಯಲ್ಲಿ ಹಸುಗಳನ್ನು ಕಟ್ಟಿದ್ದರು. ಯಾರೋ ಖದೀಮರು 2 ಆಕಳುಗಳನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ಹುಲಗೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.