

ಸವಣೂರ: ಕಸಾಯಿಖಾನೆಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನ ಹಿಡಿದ ಪೊಲೀಸರು 5 ಗೋವಿಗಳನ್ನು ರಕ್ಷಣೆ ಮಾಡಿರುವ ಘಟನೆ ಪಟ್ಟಣದ ಮಾವೂರ ರಸ್ತೆಯಲ್ಲಿ ನಡೆದಿದೆ.
ಬ್ಯಾಡಗಿ ಪಟ್ಟಣದ ಶಿವಪುರ ಬಡಾವಣೆಯ ಮಹ್ಮದ್ಅಲಿ ಮುಸ್ತಫಾ ಬೆಳಗಾಂವ (33) ಹಾಗೂ ಮಹಬೂಬಸಾಬ ಬಾಬಾಜಾನಸಾಬ ಬೆಳಗಾಂವ (45) ಎಂಬುವರು ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದರು.
ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಅಶೋಕ ಲೈಲ್ಯಾಂಡ್ ವಾಹನ ವಶಕ್ಕೆ ಪಡೆದು 5 ಆಕಳುಗಳನ್ನು ರಕ್ಷಿಸಿದ್ದಾರೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.