

ಹಿರೇಕೆರೂರ: ಅಕ್ರಮವಾಗಿ ಕಸಾಯಿಖಾನೆಗೆ ಹಸುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಪಟ್ಟಣದ ರಾಮದೇವ ಗಲ್ಲಿಯಲ್ಲಿ ನಡೆದಿದೆ.
ಪಟ್ಟಣದ ರಾಜಪ್ಪ ಹನುಮಂತಪ್ಪ ಮಡಿವಾಳರ ಹಾಗೂ ಇಬ್ರಾಹಿಂ ಮಹ್ಮದಸಾಬ ಕಚವಿ ಎಂಬುವರು ಮೂರು ಆಕಳುಗಳನ್ನು ಯಾವುದೆ ಪರವಾನಗಿ ಇಲ್ಲದೆ ಸಾಗಾಟ ಮಾಡುತ್ತಿದ್ದರು.
ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆಕಳುಗಳನ್ನು ರಕ್ಷಿಸಿದ್ದಾರೆ. ಆರೋಪಿಗಳ ವಿರುದ್ಧ ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.