ಗೋಮಾಂಸ ಮಾರಾಟ ಅಡ್ಡೆ ಮೇಲೆ ದಾಳಿ; 50 ಕೆ.ಜಿ. ಮಾಂಸ ವಶ

Crime
Crime
Published on

ರಾಣೆಬೆನ್ನೂರು: ಅಕ್ರಮವಾಗಿ ಗೋ ಹತ್ಯೆ ಮಾಡಿ ಮಾಂಸ ಮಾರಾಟ ಮಾಡುವ ಅಡ್ಡೆಯ ಮೇಲೆ ದಾಳಿ ನಡೆಸಿದ ಶಹರ ಠಾಣೆ ಪೊಲೀಸರು 50 ಕೆ.ಜಿ. ತೂಕದ ಮಾಂಸ ವಶಪಡಿಸಿಕೊಂಡ ಘಟನೆ ಇಲ್ಲಿಯ ಇಸ್ಲಾಂಪುರ ಓಣಿಯಲ್ಲಿ ನಡೆದಿದೆ.

ಯಾರೋ ಆರೋಪಿತರು ಅಕ್ರಮವಾಗಿ ಗೋ ಹತ್ಯೆ ಮಾಡಿ ಮಾಂಸ ಮಾರಾಟ ಮಾಡಲು ಮುಂದಾಗಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮಾಂಸ, ಕಬ್ಬಿಣದ ಚಾಕು, ಮಾಂಸ ನೇತು ಹಾಕುವ ಹುಕ್ಕುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net