

ಹಿರೇಕೆರೂರ: ಆಕಳಿಗೆ ನೀರು ಕುಡಿಸಲು ಹೋದಾಗ ಕಾಲು ಜಾರಿ ನೀರಿನಲ್ಲಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ನೂಲಗೇರಿ ಗ್ರಾಮದಲ್ಲಿ ನಡೆದಿದೆ.
ಕೇಶವ ಬಸವರಾಜಪ್ಪ ಕೋರಿ (30) ಮೃತ ವ್ಯಕ್ತಿ.
ಇವರು ಆಕಳಿಗೆ ನೀರು ಕುಡಿಸಲು ಗರಾಮದ ಸಣ್ಣಕೆರೆಗೆ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.