ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಎಂ.ಎಸ್. ರುದ್ರಗೌಡ್ರು ಸಂವಿಧಾನದ ಪ್ರಸ್ತಾವನೆ ಬೋಧಿಸಿದರು. ವೈ.ವೈ. ಮರಳೀಹಳ್ಳಿ ಸಂವಿಧಾನದ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಪ.ಪಂ.ಅಧ್ಯಕ್ಷ ರವೀಂದ್ರ ಮುದಿಯಪ್ಪನವರ, ಉಪಾಧ್ಯಕ್ಷ ಶಿವಕುಮಾರ ಉಪ್ಪಾರ, ಪ.ಪಂ.ಸದಸ್ಯರಾದ ಬಸವರಾಜ ಕಟ್ಟೀಮನಿ, ರವಿ ಹದಡೇರ, ಪಿ.ಡಿ. ಬಸನಗೌಡ್ರು, ಬಸವರಾಜ ಆಡಿನವರ, ವೀರನಗೌಡ ಪ್ಯಾಟಿಗೌಡ್ರು, ವಾರ್ಡ್‌ನಗಳಾದ ರಮೇಶ ಹೊಳಜೋಗಿ, ವಿನಾಯಕ ಮಾಳಾಪುರ, ಸಿ.ಸಿ. ಉಪ್ಪಿನ, ಜಕ್ಕಪ್ಪ ತೇಲಿ, ಹನುಮಂತಪ್ಪ ಗಾಜೇರ, ಸಿದ್ದಪ್ಪ ಹರಿಜನ, ರಮೇಶ ಹಿರೇಕಬ್ಬಾರ, ಜಗದೀಶ ದೊಡ್ಮನಿ, ರಾಮಣ್ಣ ಗುಡ್ಡದಮಾದಾಪುರ ಇತರರು ಇದ್ದರು. ರಮೇಶ ಕಮತಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.