constitution day: ಸಂವಿಧಾನ ಕರ್ತವ್ಯಗಳನ್ನು ಪಾಲಿಸಿ

ಬ್ಯಾಡಗಿಯ ಪಟ್ಟಣದಲ್ಲಿ ಜರುಗಿದ ಸಂವಿಧಾನ ದಿನಾಚರಣೆ ಜಾಥಾಕ್ಕೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಚಾಲನೆ ನೀಡಿ ಮಾತನಾಡಿದರು. ಚಂದ್ರಶೇಖರ ನಾಯಕ, ಕೆ.ಎಂ. ಮಲ್ಲಿಕಾರ್ಜುನ ಇತರರಿದ್ದರು.
ಬ್ಯಾಡಗಿಯ ಪಟ್ಟಣದಲ್ಲಿ ಜರುಗಿದ ಸಂವಿಧಾನ ದಿನಾಚರಣೆ ಜಾಥಾಕ್ಕೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಚಾಲನೆ ನೀಡಿ ಮಾತನಾಡಿದರು. ಚಂದ್ರಶೇಖರ ನಾಯಕ, ಕೆ.ಎಂ. ಮಲ್ಲಿಕಾರ್ಜುನ ಇತರರಿದ್ದರು.
Published on

ಬ್ಯಾಡಗಿ:ಸಂವಿಧಾನದ ಹಕ್ಕು ಹಾಗೂಕರ್ತವ್ಯಗಳನ್ನು ನಾವು ಪಾಲಿಸುವಮೂಲಕ ಕಾಯ್ದೆ, ಕಾನೂನುಗಳನ್ನುಗೌರವಿಸಬೇಕಿದೆ ಎಂದು ತಾ.ಪಂ.ಕಾರ್ಯನಿರ್ವಾಹಕಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ತಿಳಿಸಿದರು.

ಪಟ್ಟಣದಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣಸಮಾಜ ಕಲ್ಯಾಣ ಇಲಾಖೆ, ಪುರಸಭೆ,ಪರಿಶಿಷ್ಟ ಜಾತಿ ಪರಿಶಿಷ್ಟಪಂಗಡ ಹಾಗೂ ವಿವಿಧ ಒಕ್ಕೂಟಗಳಆಶ್ರಯದಲ್ಲಿ ಜರುಗಿದ ಸಂವಿಧಾನದಿನಾಚರಣೆ ಜಾಥಾಕ್ಕೆ ಚಾಲನೆನೀಡಿ ಮಾತನಾಡಿದ ಅವರು, ದೇಶಾದ್ಯಂತಸಂವಿಧಾನ ದಿನಾಚರಣೆ ಮೂಲಕ ಸಂವಿಧಾನಕುರಿತು ಜಾಗೃತಿ ಮೂಡಿಸುವ ಕಾರ್ಯಮಾಡಲಾಗುತ್ತಿದೆ. ದೇಶದಪ್ರತಿಯೊಬ್ಬ ನಾಗರಿಕ ಸಂವಿಧಾನದಲ್ಲಿಕಲ್ಪಿಸಿರುವ ಅವಕಾಶ ಹಾಗೂಹಕ್ಕುಗಳನ್ನು ಬಳಸಿಕೊಂಡುಜೀವಿಸಬಹುದಾಗಿದೆ. ನಾವುಹಕ್ಕುಗಳನ್ನು ಕೇಳಿದಂತೆ,ನಾಗರಿಕ ಕರ್ತವ್ಯಗಳನ್ನುಕೂಡ ಪಾಲಿಸಬೇಕಿದೆ ಎಂದರು.

ಸಮಾಜ ಕಲ್ಯಾಣಇಲಾಖೆ ಸಹಾಯಕ ಆಯುಕ್ತ ಶರಣಯ್ಯಕುಲಕರ್ಣಿ ಮಾತನಾಡಿ, ಸರ್ಕಾರದನಿರ್ದೇಶನದಂತೆ ಜಾಗೃತಿ, ವಿಶೇಷಕಾರ್ಯಕ್ರಮ ಆಯೋಜಿಸಿದ್ದೇವೆ.ದೇಶದ ಪ್ರತಿಯೊಬ್ಬನಾಗರಿಕರು ಇಂತಹ ಕಾರ್ಯಕ್ರಮಗಳಲ್ಲಿಪಾಲ್ಗೊಂಡು ಮಾಹಿತಿ ಪಡೆದುಕೊಳ್ಳಬೇಕಿದೆಎಂದು ತಿಳಿಸಿದರು.

ಅತಿಥಿಗಳಾಗಿತಹಸೀಲ್ದಾರ್ ಚಂದ್ರಶೇಖರ ನಾಯಕ,ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಕೆ.ಎಂ. ಮಲ್ಲಿಕಾರ್ಜುನ,ಪುರಸಭೆ ಮುಖ್ಯಾಧಿಕಾರಿವಿನಯಕುಮಾರ ಹೊಳೆಪ್ಪಗೋಳ,ಬಿಇಒ ಎಸ್.ಜಿ.ಕೋಟೆ, ಸಂಯೋಜಕಎಂ.ಮೋಹನಕುಮಾರಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net