ಬತ್ತಿಕೊಪ್ಪದಲ್ಲಿ ಶುದ್ಧ ನೀರಿನ ಘಟಕ ಸ್ಥಗಿತ water plant

ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ water plantಸ್ಥಗಿತವಾಗಿರುವುದು.
ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ water plantಸ್ಥಗಿತವಾಗಿರುವುದು.
Published on
ರಟ್ಟಿಹಳ್ಳಿ: ತಾಲೂಕಿನ ಗಡಿ ಗ್ರಾಮವಾಗಿರುವ ಬತ್ತಿಕೊಪ್ಪ ಗ್ರಾಮದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಶುದ್ಧ ಕುಡಿಯುವ ನೀರಿನ ಘಟಕ (water plant) ದುರಸ್ತಿಯಲ್ಲಿದ್ದು, ಗ್ರಾಮಸ್ಥರಿಗೆ ಸಮರ್ಪಕ ಕುಡಿಯುವ ನೀರು ಲಭ್ಯವಿಲ್ಲದಂತಾಗಿದೆ.
ಗ್ರಾಮದಲ್ಲಿ 2017-18ನೇ ಸಾಲಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಘಟಕದಿಂದ ಎರಡ್ಮೂರು ವರ್ಷಗಳ ಕಾಲ ಸಮರ್ಪಕವಾಗಿ ನೀರು ಸಿಗುತ್ತಿತ್ತು. ಕ್ರಮೇಣ ಯಂತ್ರೋಪಕರಣಗಳು ಹಾಳಾಗಿರುವ ಕಾರಣದಿಂದ ಘಟಕ ಸ್ಥಗಿತಗೊಂಡಿದೆ. ಗ್ರಾಮದಲ್ಲಿ ಸುಮಾರು 400 ಮನೆಗಳಿದ್ದು, 2 ಸಾವಿರ ಜನಸಂಖ್ಯೆ ಒಳಗೊಂಡಿದೆ. ಗ್ರಾಮಕ್ಕೆ ಬಹುಗ್ರಾಮ ನದಿ ನೀರು ಯೋಜನೆಯಡಿ ನದಿ ನೀರು ಪೂರೈಕೆಯಿದೆ. ಆದರೆ, ಅದು ವಾರಕ್ಕೆ 2 ಬಾರಿ ಮಾತ್ರ. ಕೆಲವು ಗ್ರಾಮಸ್ಥರು ಕುಡಿಯಲು ನದಿ ನೀರು ಬಳಕೆ ಮಾಡುತ್ತಿದ್ದರೆ, ಕೆಲವು ಗ್ರಾಮಸ್ಥರು ಅಕ್ಕಪಕ್ಕದ ಗ್ರಾಮಗಳಿಂದ ನೀರು ತರುತ್ತಿದ್ದಾರೆ.
ಸಮರ್ಪಕ ನಿರ್ವಹಣೆ ಕೊರತೆ: ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿದ ಬಳಿಕ 5 ವರ್ಷಗಳ ಕಾಲ ಸಂಬಂಧಿಸಿದ ಏಜೆನ್ಸಿ ಅಥವಾ ಗುತ್ತಿಗೆದಾರರು ನಿರ್ವಹಣೆ ಮಾಡಬೇಕಾಗುತ್ತದೆ. ಕುಂಚೂರು ಗ್ರಾಪಂಗೆ ಒಳಪಡುವ ಬತ್ತಿಕೊಪ್ಪ ಗ್ರಾಮದ ಘಟಕವನ್ನು ಈವರೆಗೆ ಪಂಚಾಯಿತಿಗೆ ಹಸ್ತಾಂತರ ಮಾಡಿಲ್ಲ. ಘಟಕ ದುರಸ್ತಿ ಮಾಡಿಸುವಂತೆ ಹಲವು ಬಾರಿ ಗ್ರಾಮಸ್ಥರು ಗ್ರಾಪಂ ಮತ್ತು ಶಾಸಕರ ಗಮನಕ್ಕೆ ತಂದಿದ್ದಾರೆ. ಆದರೆ, ಈವರೆಗೆ ಘಟಕ ದುರಸ್ತಿ ಕಾಣದೇ ನಿರುಪಯುಕ್ತವಾಗಿದೆ.
"

ಗ್ರಾಮದ ಶುದ್ಧ ನೀರಿನ ಘಟಕ ಹಾಳಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಘಟಕ ದುರಸ್ತಿ ಕಾಣುತ್ತಿಲ್ಲ. ಗ್ರಾಮಸ್ಥರು ಕುಡಿಯುವ ನೀರಿಗಾಗಿ ಅಕ್ಕಪಕ್ಕದ ಗ್ರಾಮಗಳಿಗೆ ಅಲೆದಾಡಬೇಕಾಗಿದೆ. 

| ಪರಮೇಶ್ವರಪ್ಪ ಹಲಗೇರಿ-ಕುಮಾರ ಬಳಿಗಾರ, ಬತ್ತಿಕೊಪ್ಪ ಗ್ರಾಮಸ್ಥರು. 

"

ಬತ್ತಿಕೊಪ್ಪ ಗ್ರಾಮದ ಘಟಕದಲ್ಲಿನ ಯಂತ್ರೋಪಕರಣ ಹಾಳಾಗಿವೆ. ಈ ಬಗ್ಗೆ ದುರಸ್ತಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಐದಾರು ದಿವಸಗಳಲ್ಲಿ ಘಟಕ ಸಮಸ್ಯೆ ಸರಿಯಾಗಲಿದೆ. 

| ಮಾಲತೇಶ, ಸಹಾಯಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಿರೇಕೆರೂರು-ರಟ್ಟಿಹಳ್ಳಿ.

ಬತ್ತಿಕೊಪ್ಪ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ದುರಸ್ತಿ ಮಾಡುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಪತ್ರ ಬರೆಯಲಾಗಿದೆ. 

| ನೀಲಕಂಠಪ್ಪ ಗೊಡ್ಡೆಮ್ಮಿ, ಪಿಡಿಒ ಕುಂಚೂರು ಗ್ರಾಮ ಪಂಚಾಯಿತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net