ಚಿಂಟ್ಸ್ ಫಂಡ್ ಗ್ರಾಹಕರಿಗೆ ವಂಚಿಸಿದ ಈಶ್ವರ ಕಂಬಿಹಿಂದೆ

ಈಶ್ವರ ಚಿನ್ನಿಕಟ್ಟಿ
ಈಶ್ವರ ಚಿನ್ನಿಕಟ್ಟಿ
Published on

ರಾಣೆಬೆನ್ನೂರ: ನಗರದ ಚಿಟ್ಸ್ ಫಂಡ್ ಗ್ರಾಹಕರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿಯ ಶಹರ ಪೊಲೀಸ್ ಠಾಣೆಯಲ್ಲಿ ಸಾಲೇಶ್ವರ ಪಟ್ಟ ಜ್ಯೋತಿ ಚಿಟ್ಸ್ಂಡ್ನ ಮಾಲೀಕ ಹಾಗೂ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದೆ.

ಸಾಲೇಶ್ವರ ಪಟ್ಟ ಜ್ಯೋತಿ ಚಿಟ್ಸ್ಂಡ್ನ ಮಾಲೀಕ ಈಶ್ವರ ಚಿನ್ನಕಟ್ಟಿ ಹಾಗೂ ಸಾಲೇಶ್ವರ ಪಟ್ಟ ಜ್ಯೋತಿ ಕ್ರೇಡಿಟ್ ಸೌಹಾರ್ದ ಸಹಕಾರಿ ನಿ. ನಿರ್ದೇಶಕ ದುಗ್ಗಪ್ಪ ಗಣೇಶ ಹೊಂಗಲ್ ಹಾಗೂ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿರುವುದು.

ಇವರ ವಿರುದ್ಧ ಗ್ರಾಹಕ ಮಾರುತಿ ಹನುಮಂತಪ್ಪ ಕೊರವರ ಎಂಬುವರು ಸೇರಿ 200ಕ್ಕೂ ಅಧಿಕ ಗ್ರಾಹಕರು ದೂರು ನೀಡಿದ್ದಾರೆ. ಆರೋಪಿತರು ಸಾಲೇಶ್ವರ ಪಟ್ಟ ಜ್ಯೋತಿ ಚಿಟ್ಸ್ಂಡ್ ಹಾಗೂ ಸಾಲೇಶ್ವರ ಪಟ್ಟ ಜ್ಯೋತಿ ಕ್ರೇಡಿಟ್ ಸೌಹಾರ್ದ ಸಹಕಾರಿ ನಿ.ದಲ್ಲಿ ಗ್ರಾಹಕರಿಂದ ಹಣ ಪಡೆದುಕೊಂಡು ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಇದೀಗ ಹಣ ನೀಡದೆ ವಂಚನೆ ಮಾಡಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಗ್ರಾಹಕರಿಗೆ ಹಣ ಕೊಡಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ದೂರು ಸ್ವೀಕಾರಕ್ಕೆ ವ್ಯವಸ್ಥೆ...

ಸದ್ಯ ಗ್ರಾಹಕರು ದೂರು ನೀಡಿರುವ ಪ್ರಕಾರ ಸಾಲೇಶ್ವರ ಪಟ್ಟ ಜ್ಯೋತಿ ಕ್ರೇಡಿಟ್ ಸೌಹಾರ್ದ ಸಹಕಾರಿ ನಿ.ದಲ್ಲಿ 1.14 ಕೋಟಿ ರೂ. ಹಾಗೂ ಚಿಟ್ಸ್ಂಡ್ನಲ್ಲಿ 1.50 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ನೂರಾರು ಜನರು ವಂಚನೆಗೆ ಒಳಗಾಗಿದ್ದು, ಅವರು ದೂರು ನೀಡಲು ಪೊಲೀಸ್ ಠಾಣೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಈ ಎರಡು ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿರುವ ಗ್ರಾಹಕರು ವಂಚನೆಗೆ ಒಳಗಾಗಿದ್ದರೆ ನೇರವಾಗಿ ಪೊಲೀಸ್ ಠಾಣೆಗೆ ಬಂದು ಅಗತ್ಯ ದಾಖಲೆಗಳೊಂದಿಗೆ ದೂರು ಸಲ್ಲಿಸಬಹುದು ಎಂದು ಶಹರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಿಐಡಿಗೆ ವರ್ಗಾವಣೆ...

ಸಾಲೇಶ್ವರ ಪಟ್ಟ ಜ್ಯೋತಿ ಕ್ರೇಡಿಟ್ ಸೌಹಾರ್ದ ಸಹಕಾರಿ ನಿ. ಹಾಗೂ ಚಿಟ್ಸ್ಂಡ್ನಿಂದ ಗ್ರಾಹಕರಿಗೆ ಕೋಟ್ಯಂತರ ರೂ. ವಂಚನೆಯಾಗಿರುವ ಆರೋಪವಿದೆ. ಆದ್ದರಿಂದ ಸ್ಥಳಿಯವಾಗಿ ಪ್ರಕರಣ ಎಲ್ಲ ರೀತಿಯಿಂದಲೂ ತನಿಖೆ ಕೈಗೊಂಡು ನಂತರ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗುವುದು ಎಂದು ಪೊಲೀಸ್ ಮೂಲದಿಂದ ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net