ನಾಡಿನ ಪರಂಪರೆ ಮಕ್ಕಳಿಗೆ ತಿಳಿಸುವ ಕಾರ್ಯವಾಗಲಿ

ಶಿಗ್ಗಾಂವಿ ಪಟ್ಟಣದಲ್ಲಿ ಏರ್ಪಡಿಸಿದ್ದ ದತ್ತಿ ಉಪನ್ಯಾಸವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ ಉದ್ಘಾಟಿಸಿದರು. ಸಿ.ವಿ. ಮತ್ತಿಗಟ್ಟಿ, ರಾಘವೇಂದ್ರ ಬೇವಿನಮರದ, ಯಲ್ಲಪ್ಪ ಹಾರೋಗೊಪ್ಪ ಇತರರಿದ್ದರು.
ಶಿಗ್ಗಾಂವಿ ಪಟ್ಟಣದಲ್ಲಿ ಏರ್ಪಡಿಸಿದ್ದ ದತ್ತಿ ಉಪನ್ಯಾಸವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ ಉದ್ಘಾಟಿಸಿದರು. ಸಿ.ವಿ. ಮತ್ತಿಗಟ್ಟಿ, ರಾಘವೇಂದ್ರ ಬೇವಿನಮರದ, ಯಲ್ಲಪ್ಪ ಹಾರೋಗೊಪ್ಪ ಇತರರಿದ್ದರು.
Published on
ಶಿಗ್ಗಾಂವಿ: ಕನ್ನಡ ನಾಡಿನ ನೆಲ, ಜಲ, ಭಾಷಾ ವೈವಿಧ್ಯತೆಯ ಭವ್ಯ ಪರಂಪರೆ, ನಮ್ಮ ನಾಡಿನ ಗತವೈಭವ ಕುರಿತು ಮಕ್ಕಳಿಗೆ ತಿಳಿಸುವುದು ಅಗತ್ಯವಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ದಿಶಾ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಕಸಾಪ, ದಿಶಾ ಶಾಲೆ ಆಶ್ರಯದಲ್ಲಿ ದಿ.ವೀರಪ್ಪ ಬಸಪ್ಪ ಮತ್ತಿಗಟ್ಟಿ, ದಿ.ಮಾತೋಶ್ರೀ ಗಂಗಮ್ಮ ಸೋಮ ಶೇಖರಯ್ಯ ಕಂಬಾಳಿಮಠ, ದಿ.ಯಜಮಾನ ಚನ್ನವೀರಪ್ಪ ಮಹಾಜನಶೆಟ್ಟರ ಇವರ ಸ್ಮರಣಾರ್ಥ ಶುಕ್ರವಾರ ಏರ್ಪಡಿಸಿದ್ದ ದತ್ತಿ ಉಪನ್ಯಾಸದಲ್ಲಿ ಮಾತನಾಡಿದ ಅವರು, ಮಕ್ಕಳ ಮನದಲ್ಲಿ ಕನ್ನಡದ ಹೆಜ್ಜೆ ಗುರುತುಗಳನ್ನು ಮೂಡಿಸಲು ಮತ್ತು ಭಾಷಾಭಿಮಾನ, ದೇಶಾಭಿಮಾನ ಇಮ್ಮಡಿಗೊಳಿಸಲು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಉಪನ್ಯಾಸಗಳು ಸಹಕಾರಿಯಾಗಿವೆ. ಕನ್ನಡ ಸಾಹಿತ್ಯ ಪರಿಷತ್ ಶಿಗ್ಗಾಂವಿ ಘಟಕದ ಕಾರ್ಯಕ್ರಮಗಳು ಸಹ ಶ್ಲಾಘನೀಯ ಎಂದರು.
ದತ್ತಿ ದಾನಿ ಸಿ.ವಿ. ಮತ್ತಿಗಟ್ಟಿ ಮಾತನಾಡಿ, ಶಿಗ್ಗಾಂವಿ ನೆಲ ಭಾವೈಕ್ಯ ನೆಲೆವೀಡು, ಸಾಮರಸ್ಯದ ತವರೂರಾಗಿದೆ. ಇಲ್ಲಿ ಕನ್ನಡದ ಕಾರ್ಯಕ್ರಮಗಳು ನಿರಂತರ ನಡೆಯಲು ಕನ್ನಡ ಸಾಹಿತ್ಯ ಭವನ ಅವಶ್ಯ. ತಾಲೂಕು ಘಟಕ ಈಗಾಗಲೇ ಪುರಸಭೆಯಿಂದ ಜಾಗ ಪಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ನಾವೆಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ದಿಶಾ ಶಾಲೆಯ ಕಾರ್ಯದರ್ಶಿ ರಾಘವೇಂದ್ರ ಬೇವಿನಮರದ ಅಧ್ಯಕ್ಷತೆ ವಹಿಸಿದ್ದರು. ಸಹ ಶಿಕ್ಷಕ ಯಲ್ಲಪ್ಪ ಹಾರೋಗೊಪ್ಪ ದತ್ತಿ ಉಪನ್ಯಾಸ ನೀಡಿದರು. ದತ್ತಿ ದಾನಿ ಆನಂದಗೌಡ ಹಿರೇಗೌಡ್ರ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಕ.ಸಾ.ಪ ಅಧ್ಯಕ್ಷ ನಾಗಪ್ಪ ಬೆಂತೂರ, ಲಲಿತಾ ಹಿರೇಮಠ, ರುದ್ರಮ್ಮ ಕಂಬಾಳಿಮಠ, ಸೋಮಶೇಖರ ಮಹಾಜನಶೆಟ್ಟರ, ಸಂಜನಾ ರಾಯ್ಕರ, ಮಂಗಲಾ ಮತ್ತಿಗಟ್ಟಿ. ರತ್ನಮ್ಮ ಪಾಟೀಲ, ಕಾವೇರಿ ಬೋಸಲೆ, ಮಾಂತೇಶ ನಾಯ್ಕೋಡಿ, ಸಂಜೀವ ಪೂಜಾರ, ಕೆ.ಬಿ. ಚನ್ನಪ್ಪ. ಬಸವರಾಜ ಕೌದಿ, ವಿ.ಎಂ. ರೇವಣಕರ, ಬಸವರಾಜ ಬಮ್ಮಿಗಟ್ಟಿ, ಸುರೇಶ ಹರಿಜನ, ಸಿದ್ದಪ್ಪ ಮಸಳಿ, ದೀಪ ಕಲಾಲ, ಎನ್.ಎಂ. ನದಾಫ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net