ಸಾಧು ಸಂತರನ್ನು ಒಂದು ಜಾತಿಗೆ ಸೀಮಿತಗೊಳಿಸಬೇಡಿ; ಜಾರಕಿಹೊಳಿ

ಉದ್ಘಾಟನೆ
ಉದ್ಘಾಟನೆ
Published on

ರಾಣೆಬೆನ್ನೂರು: ಪ್ರಪಂಚದ ಸರ್ವರೂ ಮೆಚ್ಚಿಕೊಳ್ಳುವಂಥಹ ಧರ್ಮ ಗ್ರಂಥವೆಂದು ಕರೆಯುವ ರಾಮಾಯಣವನ್ನು ರಚಿಸಿರುವ ಮಹಷಿರ್ ವಾಲ್ಮೀಕಿ, ಬುದ್ಧ, ಬಸವ, ಅಲ್ಲಮ ಸೇರಿದಂತೆ ಭರತ ಖಂಡದಲ್ಲಿ ಅವತರಿಸಿರುವ ಸಾಧು, ಸಂತರನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸಬಾರದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ತಾಲೂಕಿನ ಚಳಗೇರಿ ಗ್ರಾಮದಲ್ಲಿ ನೂತನವಾಗಿ ನಿಮಿರ್ಸಿದ ಮಹಷಿರ್ ವಾಲ್ಮೀಕಿ ದೇವಸ್ಥಾನ ಉದ್ಘಾಟಿಸಿ ಅವರು ಮಾತನಾಡಿದರು.

ಅಂಖಂಡ ಭಾರತದಲ್ಲಿನ ಹಾಗೂ ಪ್ರಪಂಚದ ಸಮಸ್ತ ಮಾನವ ಕುಲದ ಕಲ್ಯಾಣಕ್ಕಾಗಿ ನೀಡಿರುವ ಧರ್ಮ ಸಂದೇಶ ಸರ್ವರಿಗೂ, ಸರ್ವಕಾಲಕ್ಕೂ ಒಪ್ಪುವಂತಾಗಿದೆ. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಸಮಗ್ರ ಮನುಕುಲವು ಸಾಗುವುದರೊಂದಿಗೆ ತಮ್ಮ ಜೀವನ ಸಾರ್ಥಕಪಡಿಸಿಕೊಳ್ಳಬೇಕು. ಕೇವಲ ಪೂಜಿಸುವುದಕ್ಕಾಗಿಯೇ ಮೂತಿರ್ ಪ್ರತಿಷ್ಠಾಪಿಸುವುದಕ್ಕಿಂತ, ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಅವರ ಮೂತಿರ್ಗಳನ್ನು ಪೂಜಿಸಿದ್ದು ಸಾರ್ಥಕವಾಗುತ್ತದೆ ಎಂದರು.

ಶಾಸಕ ಪ್ರಕಾಶ ಕೋಳಿವಾಡ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಸಚಿವ ಆರ್. ಶಂಕರ, ಹರಿಹರ ಮಾಜಿ ಶಾಸಕ ಎಸ್. ರಾಮಪ್ಪ, ಹಾವೇಮುಲ್ಲ ಅಧ್ಯಕ್ಷ ಮಂಜನಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಚಂದ್ರಪ್ಪ ಬೇಡರ, ಕೃಷ್ಣಪ್ಪ ಕಂಬಳಿ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ನಗರಸಭೆ ಮಾಜಿ ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ಪ್ರಮುಖರಾದ ಬಸನಗೌಡ ಮರದ, ರವಿಂದ್ರಗೌಡ ಪಾಟೀಲ, ದರ್ಶನ ಲಮಾಣಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net