ತಾಲೂಕಿನ ಜನಗಣತಿ ಪ್ರಕ್ರಿಯೆಯ ಮಾಹಿತಿ ನೀಡಿದ ತಹಸೀಲ್ದಾರ್ ಎಸ್.ರೇಣುಕಾ, ತಾಲೂಕಿನ 164 ಗ್ರಾಮಗಳು ಹಾಗೂ ಹಾನಗಲ್ಲ ಪುರಸಭೆ ಒಳಗೊಂಡು 70 ಸಾವಿರ ಕುಟುಂಬಗಳಿವೆ. 575 ಶಿಕರು ಗಣತಿದಾರರಾಗಿ ಹಾಗೂ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಣತಿಗಾಗಿ ಒಟ್ಟು 469 ವಿಭಾಗ ರಚಿಸಲಾಗಿದೆ. ಪ್ರತಿ ಕುಟುಂಬ 33 ವಿವರಗಳನ್ನು ಗಣತಿದಾರರ ಮಾಹಿತಿಯಲ್ಲಿ ದಾಖಲಿಸಬೇಕಾಗುತ್ತದೆ. ಮನೆ ಸಂಖ್ಯೆ, ನೆಲಕ್ಕೆ ಬಳಸಿದ ಸಾಮಗ್ರಿ, ಗೋಡೆಗೆ ಬಳಸಲಾದ ಸಾಮಗ್ರಿ, ವಾಸಿಸುತ್ತಿರುವ ವ್ಯಕ್ತಿಗಳ ಸಂಖ್ಯೆ, ಮನೆಯ ಕೊಠಡಿ ಸಂಖ್ಯೆ, ನೀರಿನ ಮೂಲ, ಬೆಳಕಿನ ಸ್ಥಿತಿ, ಶೌಚಗೃಹ, ಸ್ನಾನಗೃಹ, ಅಡುಗೆ ಮನೆ, ಗೃಹೋಪಯೋಗಿ ವಸ್ತುಗಳು ಸೇರಿದಂತೆ ವಿವಿಧ ಮಾಹಿತಿ ಈ ಸಂದರ್ಭದಲ್ಲಿ ಕಲೆಹಾಕಬೇಕಾಗುತ್ತದೆ. ಈ ಮಾಹಿತಿ ನೀಡುವುದರಿಂದ ಸರ್ಕಾರದ ಯಾವುದೇ ಸೌಲಭ್ಯವನ್ನು ಕಡಿತಗೊಳಿಸುವುದಿಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ವಿವರಿಸಿದರು.