Cash counter: ಪುರಸಭೆಯಲ್ಲಿ ಕ್ಯಾಶ್ ಕೌಂಟರ್‌ಗೆ ಚಾಲನೆ

ಹಾನಗಲ್ಲ ಪುರಸಭೆಯಲ್ಲಿ ಕ್ಯಾಶ್ ಕೌಂಟರ್‌ಗೆ ಶಾಸಕ ಶ್ರೀನಿವಾಸ ಮಾನೆ ಚಾಲನೆ ನೀಡಿದರು. ಈರಪ್ಪ ಬೈಲವಾಳ, ಯಲ್ಲಪ್ಪ ಕಿತ್ತೂರ, ರಾಧಿಕಾ ದೇಶಪಾಂಡೆ, ನಾಗಪ್ಪ ಸವದತ್ತಿ, ಪರಶುರಾಮ ಖಂಡೂನವರ, ವೀಣಾ ಗುಡಿ, ಖುರ್ಷಿದ್‌ಅಹ್ಮದ್ ಹುಲ್ಲತ್ತಿ, ಶಕೀಲ ಬಾಳೂರ, ವೈ.ಕೆ. ಜಗದೀಶ ಇತರರಿದ್ದರು.
ಹಾನಗಲ್ಲ ಪುರಸಭೆಯಲ್ಲಿ ಕ್ಯಾಶ್ ಕೌಂಟರ್‌ಗೆ ಶಾಸಕ ಶ್ರೀನಿವಾಸ ಮಾನೆ ಚಾಲನೆ ನೀಡಿದರು. ಈರಪ್ಪ ಬೈಲವಾಳ, ಯಲ್ಲಪ್ಪ ಕಿತ್ತೂರ, ರಾಧಿಕಾ ದೇಶಪಾಂಡೆ, ನಾಗಪ್ಪ ಸವದತ್ತಿ, ಪರಶುರಾಮ ಖಂಡೂನವರ, ವೀಣಾ ಗುಡಿ, ಖುರ್ಷಿದ್‌ಅಹ್ಮದ್ ಹುಲ್ಲತ್ತಿ, ಶಕೀಲ ಬಾಳೂರ, ವೈ.ಕೆ. ಜಗದೀಶ ಇತರರಿದ್ದರು.
Published on
ಹಾನಗಲ್ಲ: ಪುರಸಭೆ ಕಚೇರಿಯಲ್ಲೇ ಬ್ಯಾಂಕ್ ಕೌಂಟರ್ (Cash counter) ತೆರೆದಿರುವುದರಿಂದ ತೆರಿಗೆ ಸಂಗ್ರಹಣೆಯಲ್ಲೂ ವೇಗ ಹೆಚ್ಚುತ್ತದೆ. ಅಲ್ಲದೆ, ಪಾರದರ್ಶಕ ಹಣಕಾಸು ವ್ಯವಹಾರಕ್ಕೆ ಸಹಕಾರಿಯಾಗುತ್ತದೆ. ಸಾರ್ವಜನಿಕರು ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಸ್ಥಳೀಯ ಪುರಸಭೆ ಕಚೇರಿಯಲ್ಲಿ ಆರಂಭಿಸಿರುವ ಬ್ಯಾಂಕ್ ಆ್ ಬರೋಡಾ ಕ್ಯಾಶ್ ಕೌಂಟರ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಇಲ್ಲಿಯವರೆಗೆ ಸಾರ್ವಜನಿಕರು ಪುರಸಭೆ ತೆರಿಗೆ ಪಾವತಿಸಲು ಬ್ಯಾಂಕ್‌ಗಳಿಗೆ ತೆರಳಿ ಸರದಿಯಲ್ಲಿ ನಿಲ್ಲಬೇಕಾಗಿತ್ತು. ಇದರಿಂದ ಸಮಯ ವ್ಯರ್ಥವಾಗುವುದರೊಂದಿಗೆ ಅನಗತ್ಯ ತೊಂದರೆಯಾಗುತ್ತಿತ್ತು. ಇದೀಗ ಪುರಸಭೆಯಲ್ಲಿಯೇ ಬ್ಯಾಂಕ್ ಆ್ ಬರೋಡಾ ಕೌಂಟರ್ ಆರಂಭವಾಗಿರುವುದರಿಂದ ನಾಗರಿಕರು ಒಂದೇ ಸ್ಥಳದಲ್ಲಿ ತೆರಿಗೆ ಪಾವತಿ ಸೇರಿದಂತೆ ಅಗತ್ಯ ಸೇವೆಗಳನ್ನು ತುರ್ತಾಗಿ ಪಡೆಯಲು ಅನುಕೂಲವಾಗಲಿದೆ. ಸಾರ್ವಜನಿಕರ ಸೇವೆ ಸುಲಭವಾಗಿಸುವ ಇಂತಹ ಜನಪರ ಕ್ರಮಗಳಿಗೆ ಸರ್ಕಾರ ಹಾಗೂ ಸ್ಥಳೀಯ ಆಡಳಿತ ಸದಾ ಆದ್ಯತೆ ನೀಡುತ್ತಿದೆ’ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಈರಪ್ಪ ಬೈಲವಾಳ, ಪುರಸಭೆ ಮಾಜಿ ಅಧ್ಯಕ್ಷ ಯಲ್ಲಪ್ಪ ಕಿತ್ತೂರ, ರಾಧಿಕಾ ದೇಶಪಾಂಡೆ, ನಾಗಪ್ಪ ಸವದತ್ತಿ, ಪರಶುರಾಮ ಖಂಡೂನವರ, ವೀಣಾ ಗುಡಿ, ಖುರ್ಷಿದ್‌ಅಹ್ಮದ್ ಹುಲ್ಲತ್ತಿ, ನಗರ ಕಾಂಗ್ರೆಸ್ ಅಧ್ಯಕ್ಷ ಶಕೀಲ ಬಾಳೂರ, ಮೇಕಾಜಿ ಕಲಾಲ, ಸುರೇಶ ನಾಗಣ್ಣನವರ, ಬಾಬಾಜಾನ ಕೊಂಡವಾಡೆ, ಗೌಸ್ ತಾಂಡೂರ, ರಾಜಕುಮಾರ ಶಿರಪಂಥಿ, ಸಿಕಂದರ ವಾಲಿಕಾರ, ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಯೋಜನಾಧಿಕಾರಿ ಶಿವಾನಂದ ಕ್ಯಾಲಕೊಂಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net