Chili pepper ಡಬ್ಬಿ ಮೆಣಸಿನಕಾಯಿ ಭರ್ಜರಿ ದರ

ಬ್ಯಾಡಗಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ (Chili pepper )ಟೆಂಡರ್‌ಗೆ ಹಾಕಿರುವುದು.
ಬ್ಯಾಡಗಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ (Chili pepper )ಟೆಂಡರ್‌ಗೆ ಹಾಕಿರುವುದು.
Published on
ಬ್ಯಾಡಗಿ: ಇಲ್ಲಿನ ಮೆಣಸಿನಕಾಯಿ Chili pepper ಮಾರುಕಟ್ಟೆಯಲ್ಲಿ ಶನಿವಾರದ ಟೆಂಡರ್‌ನಲ್ಲಿ ಡಬ್ಬಿ ತಳಿ ಕ್ವಿಂಟಾಲ್‌ಗೆ 48 ಸಾವಿರ ರೂ.ಗೆ ಮಾರಾಟವಾಗಿದೆ.
ಬ್ಯಾಡಗಿ ಮಾರುಕಟ್ಟೆಗೆ ಎರಡು ತಿಂಗಳಿಂದ ಮೆಣಸಿನಕಾಯಿ ಆವಕ ಹಂತ ಹಂತವಾಗಿ ಹೆಚ್ಚುತ್ತಿದೆ. ಹೊಸ ಮೆಣಸಿನಕಾಯಿ ಚೀಲಗಳನ್ನು ಟೆಂಡರ್‌ಗೆ ಇಡಲಾಗುತ್ತಿದೆ. ಮಳೆಗಾಲದ ಕಾಯಿಗಳು ಅತ್ಯಂತ ಗುಣಮಟ್ಟದಿಂದಿರುವ ಕಾರಣ ಹೆಚ್ಚಿನ ದರ ಸಿಗುತ್ತಿದೆ.
ರೈತರು ಬೆಳೆ ಕುಂಠಿತಗೊಂಡು ಇಳುವರಿ ಕಡಿಮೆಯಾದರೂ ಬೆಲೆ ಏರಿಕೆಯಿಂದ ಕೊಂಚ ಸಂತಸದಲ್ಲಿದ್ದಾರೆ. ಸಂಕ್ರಮಣ ಹಬ್ಬದ ಬಳಿಕ ಮಾರುಕಟ್ಟೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಜ. 17ರಂದು ಮೆಣಸಿನಕಾಯಿ ಬೆಲೆ: ಕಡ್ಡಿ 4109-44009 ರೂ., ಡಬ್ಬಿ ತಳಿ 4509-48009 ಹಾಗೂ ಗುಂಟೂರು 1109-16009 ರೂ.ನಂತೆ ಮಾರಾಟವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net