ನೀರು ಹರಿಸದಿದ್ದರೆ ರೈತರೊಂದಿಗೆ ಹೋರಾಟ water

ಹಾನಗಲ್ಲ ತಾಲೂಕು ಬ್ಯಾತನಾಳ ಗ್ರಾಮದ ಗುಡ್ಡದಮಲ್ಲಾಪುರ ನೀರಾವರಿ ಪಂಪ್ ಹೌಸ್ ಸ್ಥಳಕ್ಕೆ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ನೇತೃತ್ವದಲ್ಲಿ ರೈತರು ತೆರಳಿ ವ್ಯವಸ್ಥೆ ಪರಿಶೀಲಿಸಿದರು.
ಹಾನಗಲ್ಲ ತಾಲೂಕು ಬ್ಯಾತನಾಳ ಗ್ರಾಮದ ಗುಡ್ಡದಮಲ್ಲಾಪುರ ನೀರಾವರಿ ಪಂಪ್ ಹೌಸ್ ಸ್ಥಳಕ್ಕೆ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ನೇತೃತ್ವದಲ್ಲಿ ರೈತರು ತೆರಳಿ ವ್ಯವಸ್ಥೆ ಪರಿಶೀಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಎಚ್ಚರಿಕೆ
  • ಏತ ನೀರಾವರಿ ಪಂಪ್ ಹೌಸ್‌ಗೆ ಭೇಟಿ

ಬ್ಯಾಡಗಿ: ತಾಲೂಕಿನಗುಡ್ಡದಮಲ್ಲಾಪುರ ಏತ ನೀರಾವರಿಯೋಜನೆಯಿಂದ ನೀರು ಹರಿಸುವಲ್ಲಿನೀರಾವರಿ ಇಲಾಖೆ ಇಂಜಿನಿಯರ್ನಿರ್ಲಕ್ಷ್ಯದಿಂದ ಸಾವಿರಾರುರೈತರು ಸೌಲಭ್ಯ ವಂಚಿತರಾಗಿದ್ದಾರೆ.ಎರಡುದಿನಗಳಲ್ಲಿ ನೀರು ಹರಿಸದಿದ್ದರೆರೈತರೊಂದಿಗೆ ಹೋರಾಟ ನಡೆಸಲಾಗುವುದುಎಂದು ಬಿಜೆಪಿ ಜಿಲ್ಲಾಧ್ಯಕ್ಷವಿರೂಪಾಕ್ಷಪ್ಪ ಬಳ್ಳಾರಿಎಚ್ಚರಿಸಿದರು.

ಹಾನಗಲ್ಲತಾಲೂಕಿನ ಬ್ಯಾತನಾಳ ಗ್ರಾಮದವರದಾ ನದಿ ದಡದಲ್ಲಿರುವ ಗುಡ್ಡದಮಲ್ಲಾಪುರಏತ ನೀರಾವರಿ ಯೋಜನೆ ಪಂಪ್‌ಹೌಸ್ಸ್ಥಳಕ್ಕೆ ರೈತರೊಂದಿಗೆ ತೆರಳಿಮಂಗಳವಾರ ಸ್ಥಳ ಪರಿಶೀಲಿಸಿಮಾತನಾಡಿದರು.ಏತನೀರಾವರಿಯೋಜನೆಯಿಂದ 110ಕೆರೆಗಳಿಗೆನೀರು ತುಂಬಬೇಕಿದೆ.ಆದರೆ,ಅಧಿಕಾರಿಗಳು,ಇಂಜಿನಿಯರ್ನಿರ್ಲಕ್ಷ್ಯದಿಂದ ತಾಲೂಕಿನಯೋಜನೆ ವ್ಯಾಪ್ತಿಯ 13ಹೆಕ್ಟೇರ್ಪ್ರದೇಶದ ರೈತರು ನೀರಿಲ್ಲದೆಪರದಾಡುವಂತಾಗಿದೆ.ಪ್ರಸಕ್ತಸಾಲಿನಲ್ಲಿ ಮಳೆ ಕೊರತೆಯಾಗಿದೆ.ಇಂತಹಸ್ಥಿತಿಗಳಲ್ಲಿ ವರದಾನವಾಗಿರುವನೀರಾವರಿ ಯೋಜನೆ ಮೂಲಕ ನೀರುಹರಿಸಿ,ರೈತರಿಗೆಅನುಕೂಲ ಮಾಡಿಕೊಡಬೇಕು ಎಂದರು.

ಎಲ್ಲೆಡೆಕಾಲುವೆಗಳಲ್ಲಿ ಹೂಳು ತುಂಬಿದ್ದು,ಗಿಡಗಂಟೆಗಳು ಬೆಳೆದಿದ್ದು ನೀರುಹರಿಯದಂತಾಗಿದೆ.ಇದರಿಂದಬೇಸತ್ತು ರೈತರು ತಮ್ಮ ವ್ಯಾಪ್ತಿಯಗ್ರಾಮ ಪಂಚಾಯಿತಿ ಕಚೇರಿ ಎದುರುಧರಣಿ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆಎಂದರು.

ಟಿಸಿಎಲ್ಲಿದೆ ಸತ್ಯ ಹೇಳ್ರಿ?: ಮುಂಗಾರುಮಳೆ ಆರಂಭ ಮುನ್ನ ಪಂಪ್‌ಹೌಸ್ಹಾಗೂ ಟಿಸಿ ಪರಿಶೀಲಿಸಬೇಕು.ಆದರೆ,ಜೂನ್‌ನಲ್ಲಿಟಿಸಿ ಕೆಟ್ಟಿದೆ,ದುರಸ್ತಿಮಾಡಬೇಕು ಎನ್ನುತ್ತಿದ್ದಾರೆ.ಅಲ್ಲದೆ,ಟಿಸಿಯನ್ನುದುರಸ್ತಿಗೆ ಬೆಂಗಳೂರು,ಹೈದರಾಬಾದ್‌ಗೆಕಳುಹಿಸಿರುವುದಾಗಿ ಸುಳ್ಳುಹೇಳುತ್ತಿದ್ದಾರೆ.ವಿದ್ಯುತ್ಪರಿವರ್ತಕ ಎಲ್ಲಿದೆ ಎಂದುಅಧಿಕಾರಿಗಳು ಸತ್ಯ ಹೇಳಬೇಕುಎಂದು ಒತ್ತಾಯಿಸಿದರುಜಗದೀಶಕಣಗಿಲಬಾವಿ,ವೀರಭದ್ರಪ್ಪಗೊಡಜಿ,ಕೀರೇಶಅಜಗೊಂಡ್ರ,ಆಂಜನೇಯಅತ್ತಿಕಟ್ಟಿ,ವಿನಯಹಿರೇಮಠ ಇತರರಿದ್ದರು.

"

ತಾಲೂಕಿನ ಜೀವನಾಡಿಯಾಗಿರುವ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲು ಮಾಜಿ ಶಾಸಕರು ಆಣೂರು, ಬುಡಪನಹಳ್ಳಿ ಹಾಗೂ ತುಂಗಭದ್ರಾ ನದಿಯ ಕುಡಿಯುವ ನೀರಿನ ಪೈಪ್‌ಲೈನ್ ಯೋಜನೆ ಪೂರ್ಣಗೊಳಿಸಿದ್ದರು. ಈಗಿನ ಅಧಿಕಾರಿಗಳು, ಇಂಜಿನಿಯರ್‌ಗಳು ನೀರು ಹರಿಸಲು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ರೈತರಿಗೆ ತೊಂದರೆ ಆಗುತ್ತದೆ. ಕೂಡಲೇ ಶಾಸಕರು ಮಧ್ಯಸ್ಥಿಕೆ ವಹಿಸಿ ನ್ಯಾಯ ಕೊಡಿಸಲು ಮುಂದಾಗಬೇಕು.ನಿಂಗಪ್ಪ ಬಟ್ಟಲಕಟ್ಟೆ, ಬಿಜೆಪಿ ತಾಲೂಕು ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net