

ಪ್ರಮುಖ ಮುಖ್ಯಾಂಶಗಳು
ಬ್ಯಾಡಗಿ:ಇಲ್ಲಿನ ಮೆಣಸಿನಕಾಯಿಮಾರುಕಟ್ಟೆಯಲ್ಲಿ ಗುರುವಾರಡಬ್ಬಿ ತಳಿ ಕ್ವಿಂಟಾಲ್‌ಗೆ 55ಸಾವಿರ ರೂ. ನಂತೆಮಾರಾಟವಾಗಿದ್ದು, ರೈತಸಮುದಾಯದಲ್ಲಿ ಸಂತಸ ಮೂಡಿಸಿದೆ.
ಎರಡು ವರ್ಷಗಳಹಿಂದೆ ಕಡ್ಡಿ ಹಾಗೂ ಡಬ್ಬಿಮೆಣಸಿನಕಾಯಿ ದರ ಅರ್ಧ ಲಕ್ಷ ರೂ.ದಾಟಿತ್ತು. ಪರಿಣಾಮಮರು ವರ್ಷ ಅಧಿಕ ರೈತರು ಬೆಳೆದಿದ್ದರಿಂದಕಳೆದ ಬಾರಿ ಸ್ವಲ್ಪ ಮಟ್ಟಿಗೆಬೆಲೆ ಇಳಿಕೆಯಾಗಿತ್ತು. ಒಟ್ಟಾರೆವಹಿವಾಟಿನ ಮೊತ್ತ ಕುಸಿತದಿಂದಮಾರುಕಟ್ಟೆಯ ಶುಲ್ಕ ಸಂಗ್ರಹದಲ್ಲೂಕಡಿಮೆಯಾಗಿತ್ತು. ಇದೀಗಗುಣಮಟ್ಟದ ಒಣ ಮೆಣಸಿನಕಾಯಿಗೆಉತ್ತಮ ದರ ದೊರೆತಿದೆ.
ಜಿಟಿಜಿಟಿಮಳೆ ಹಾಗೂ ಹಸಿ ಬರಗಾಲದಿಂದ ಈ ವರ್ಷಮೆಣಸಿನಕಾಯಿ ಇಳುವರಿ ಕೊರತೆಯಾಗಬಹುದುಎಂಬ ಅಂದಾಜಿದೆ. ಕಳೆದವಾರ (ನ.11ರಂದು)ಕಡ್ಡಿ ಕಾಯಿ 3 ಸಾವಿರದಿಂದ38,500 ರೂ.ವರೆಗೂಮಾರಾಟವಾಗಿದೆ. ಡಬ್ಬಿತಳಿಗೆ 3,500ದಿಂದ 41,000ರೂ.ವರೆಗೂದರ ಲಭಿಸಿದೆ. ನಾಲ್ಕಾರುದಿನಗಳಲ್ಲಿ ಕಡ್ಡಿ ತಳಿ ದರ ಏರಿಕೆಕಾಣುತ್ತಿದೆ. ಡಬ್ಬಿತಳಿಯಹೊಸ ಬೆಳೆಯ ಒಂದೇ ಚೀಲಕ್ಕೆ 90ಜನ ಬಿಡ್ ಮಾಡಿದ್ದರಿಂದ15 ಸಾವಿರ ರೂ. ಗೆತಲುಪಿದೆ.
ಇಂದಿನಟೆಂಡರ್ ದರ
ಗುರುವಾರಮಾರುಕಟ್ಟೆಗೆ 4,971 ಚೀಲಗಳುಆವಕಗೊಂಡಿವೆ. ಕಡ್ಡಿ3209 ರಿಂದ 40,009 ಹಾಗೂಡಬ್ಬಿ 4009 ರಿಂದ 55,555ರೂ., ಗುಂಟೂರು1229 ರಿಂದ 15,009ರೂಪಾಯಿವರೆಗೂ ಮಾರಾಟವಾಗಿವೆಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಕೋಲ್ಡ್ಸ್ಟೋರೇಜ್ ಘಟಕದಲ್ಲಿ 1 ರಿಂದ3 ಲಕ್ಷ ಚೀಲ ಮೆಣಸಿನಕಾಯಿಸಂಗ್ರಹಿಸಲಾಗುತ್ತಿದೆ. ರೈತರುಹಾಗೂ ಸಣ್ಣಪುಟ್ಟ ವರ್ತಕರು,ಖರೀದಿದಾರರು ವರ್ಷದ 12ತಿಂಗಳು ವಹಿವಾಟುನಡೆಸುತ್ತಿದ್ದಾರೆ. ಪ್ರಸಕ್ತಹಂಗಾಮಿನ ಬೆಳೆ ಮಾರುಕಟ್ಟೆಗೆಸಣ್ಣ ಪ್ರಮಾಣದಲ್ಲಿ ಬರುತ್ತಿದೆ.ಕೋಲ್ಡ್ ಸ್ಟೋರೇಜ್‌ಗಳಲ್ಲಿಸಂಗ್ರಹಿಸಿದ ಚೀಲಗಳ ಆವಕ ಹೆಚ್ಚಿದೆ.
ಈಗ ಸೀಜನ್ ಆರಂಭವಾಗುತ್ತಿರುವ ಪರಿಣಾಮ ಹೊಸ ಮೆಣಸಿನಕಾಯಿ ಮಾರುಕಟ್ಟೆಗೆ ಬರುತ್ತಿದೆ. ಕಡ್ಡಿ ಹಾಗೂ ಡಬ್ಬಿಯ ಗುಣಮಟ್ಟದ ಕಾಯಿಗೆ ಉತ್ತಮ ಬೆಲೆಯಿದೆ. ಗುರುವಾರ ರೈತರೊಬ್ಬರು ಹೊಸ ಕಾಯಿಯ ಒಂದೇ ಚೀಲ ಟೆಂಡರ್‌ಗೆ ಹಾಕಿದ್ದು, ಆ ಲಾಟ್‌ಗೆ 90 ಜನ ಬಿಡ್ ಮಾಡಿದ ಪರಿಣಾಮ (ಒಂದು ಚೀಲ) 55,555 ರೂ.ಗೆ ಮಾರಾಟವಾಗಿದೆ. ವಾರದಿಂದ ವಾರಕ್ಕೆ ಮೆಣಸಿನಕಾಯಿ ದರ ಏರುತ್ತಿದೆ.