ಬಸ್ ನಲ್ಲಿ ಮಹಿಳೆಯ ಬ್ಯಾಗ್ನಲ್ಲಿದ್ದ ಚಿನ್ನಾಭರಣ ಕಳ್ಳತನ

Crime
Crime
Published on

ಹಾವೇರಿ: ಕೆಎಸ್ಆರ್ಟಿಸಿ ಬಸ್ ಹತ್ತುವಾಗ ಮಹಿಳೆಯ ಬ್ಯಾಗ್ನಲ್ಲಿದ್ದ 6.81 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ತಾಲೂಕಿನ ರಾಣೆಬೆನ್ನೂರ ಟು ಗಂಗಾವತಿಗೆ ತೆರಳುವ ಬಸ್ನಲ್ಲಿ ನಡೆದಿದೆ.

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ಅಚಿರ್ತಾ ನಾಗರಾಜ ಜ್ಯೋತಿ (29) ಎಂಬುವರ ಚಿನ್ನಾಭರಣ ದೋಚಿರುವುದು.

ಇವರು ರಾಣೆಬೆನ್ನೂರ ನಗರದಿಂದ ಗಂಗಾವತಿಗೆ ತೆರಳುತ್ತಿದ್ದ ಬಸ್ ಹತ್ತಿದ್ದಾರೆ. ಗುತ್ತಲ ಬಳಿ ಬಸ್ ಬಂದಾಗ ತಮ್ಮ ಬ್ಯಾಗ್ನಲ್ಲಿದ್ದ ಚಿನ್ನಾಭರಣ ನೋಡಿದಾಗ ಇಲ್ಲವಾಗಿದೆ. ಬ್ಯಾಗ್ನಲ್ಲಿ ಚಿನ್ನದ ಮಾಂಗಲ್ಯ ಸರ, ಉಂಗುರ, ಕಿವಿ ಓಲೆ ಸೇರಿ 6.81 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದ್ದವು ಎಂದು ದೂರಿನಲ್ಲಿ ಮಹಿಳೆ ದಾಖಲಿಸಿದ್ದಾರೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net