ಬಸ್ ಹತ್ತುವಾಗ ಚಿನ್ನದ ಸರ ಕಳ್ಳತನ

Crime
Crime
Published on

ಹಾವೇರಿ: ಬಸ್ ಹತ್ತುತ್ತಿದ್ದ ಸಮಯದಲ್ಲಿ ಬ್ಯಾಗ್ನಲ್ಲಿದ್ದ 2.48 ಲಕ್ಷ ರೂ. ಮೌಲ್ಯದ 27 ಗ್ರಾಂ ತೂಕದ ಚಿನ್ನದ ಸರವನ್ನು ಯಾರೋ ದೋಚಿರುವ ಘಟನೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ತಾಲೂಕಿನ ವರದಹಳ್ಳಿಯ ಉಮಾ ಗುಡ್ಡಪ್ಪ ಮಹಾರಾಜಪೇಟೆ (40) ಎಂಬುವರ ಚಿನ್ನದ ಸರ ದೋಚಿರುವುದು.

ಇವರು ಬಸ್ ಹತ್ತುತ್ತಿದ್ದ ಸಮಯದಲ್ಲಿ ಯಾರೋ ಖದೀಮರು ಸರ ದೋಚಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net