ಕ್ಷಣಾರ್ಧದಲ್ಲೇ ಸುಟ್ಟು ಕರಕಲಾದ ಬಸ್; ಉಳಿದ ಪ್ರಯಾಣಿಕರ ಜೀವ

ಬೆಂಕಿಗಾಹುತಿ
ಬೆಂಕಿಗಾಹುತಿ
Published on

ರಾಣೆಬೆನ್ನೂರು: ಟೈಯರ್ ಬ್ಲಾಸ್ಟ್ ಆಗಿ ಹತ್ತಿಕೊಂಡ ಬೆಂಕಿಯಿಂದ ಕೆಎಸ್ಆರ್ ಟಿಸಿ ಬಸ್ ಸಂಪೂರ್ಣ ಸುಟ್ಟು ಕರಕಲಾದ ಘಟನೆ ತಾಲೂಕಿನ ದೇವರಗುಡ್ಡ ಬಳಿ ಮಂಗಳವಾರ ಬೆಳಗಿನ ಜಾವ ನಡೆದಿದ್ದು, ಚಾಲಕನ ಜಾಗೃತೆಯಿಂದ ಅದೃಷ್ಟವಶಾಹತ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನಿಂದ ಗದಗಿಗೆ ಹೊರಟಿದ್ದ ಕೆಎಸ್ಆರ್ ಟಿಸಿಯ ಪಲ್ಲಕ್ಕಿ ಬಸ್ ಬೆಂಕಿಗಾಹುತಿಯಾಗಿರುವುದು.

ರಾಣೆಬೆನ್ನೂರಿನಿಂದ ದೇವರಗುಡ್ಡ ಬಳಿ ಬಸ್ ಹೊರಟಿದ್ದ ಸಮಯದಲ್ಲಿ ಬ್ರೇಕ್ ಲೈನರ್ ಚಕ್ರಕ್ಕೆ ತಿಕ್ಕಿ ಬಿಸಿಯಾಗಿದೆ. ಇದರಿಂದ ವಾಸನೆ ಬಂದಿದ್ದರಿಂದ ಚಾಲಕ ಕೂಡಲೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಮೊದಲು ಕೆಳಗೆ ಇಳಿಸಿದ್ದಾನೆ. ಅಷ್ಟರಲ್ಲಿ ಟೈಯರ್ ಬ್ಲಾಸ್ಟ್ ಆಗಿ ಬೆಂಕಿ ಹತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಬಸ್ ತುಂಬ ಬೆಂಕಿ ಆವರಿಸಿಕೊಂಡಿದೆ. ಚಾಲಕ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಬಸ್ ಸಂಪೂರ್ಣ ಸುಟ್ಟು ಹೋಗಿದೆ.

ಬಸ್ ನಲ್ಲಿ ೧೫ಕ್ಕೂ ಅಧಿಕ ಪ್ರಯಾಣಿಕರಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಸಾರಿಗೆ ಸಂಸ್ಥೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net