Brothers ಕಾಲು ಜಾರಿ ಕೆರೆಯಲ್ಲಿ ಬಿದ್ದು ಅಣ್ಣ ತಮ್ಮ ಸಾವು

ಕಾಲು ಜಾರಿ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ ಅಣ್ಣ ತಮ್ಮ.
ಕಾಲು ಜಾರಿ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ ಅಣ್ಣ ತಮ್ಮ.
Published on
ಹಾನಗಲ್ಲ:
ತಾಲೂಕಿನ ಇನಾಂ ನೀರಲಗಿ ಗ್ರಾಮದ ಸಚಿನ್ ಮಾರುತೆಪ್ಪ ಬ್ಯಾತನಾಳ (13) ಹಾಗೂ ಸೃಜನ್ ಮಾರುತೆಪ್ಪ ಬ್ಯಾತನಾಳ (11) ಮೃತ ಅಣ್ಣ ತಮ್ಮ.
ಇಬ್ಬರೂ ಬಾಲಕರು ಬೇಸಿಗೆ ರಜೆ ಕಳೆಯಲು ತಮ್ಮ ಸಂಬಂಧಿಕರ ಮನೆಯಾದ ಕಂಚಿನೆಗಳೂರ ಗ್ರಾಮದ ವಾಸುದೇವ ಗಿಡ್ಡಮಲ್ಲಣ್ಣನವರ ಅವರ ಮನೆಗೆ ಬಂದಿದ್ದರು.
ಮಧ್ಯಾಹ್ನ ತಮ್ಮ ದೊಡ್ಡಪ್ಪನೊಂದಿಗೆ ಜಮೀನಿಗೆ ತೆರಳಿ ಮರಳಿ ನಡೆದುಕೊಂಡು ಬರುವಾಗ ಮಾರ್ಗ ಮಧ್ಯೆ ಇರುವ ಇಟಗಿನ ಕೆರೆಯಲ್ಲಿ ಸಚಿನ್ ಹಾಗೂ ಸೃಜನ್ ಇಬ್ಬರೂ ಬಾಲಕರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net