ಅಣ್ಣನ ಮನೆ ದೋಚಿದ್ದ ತಮ್ಮನ ಬಂಧನ house robbery

ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರು. house robbery
ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರು. house robbery
Published on
ಹಾನಗಲ್ಲ: ತನ್ನ ಅಣ್ಣನು ಕೃಷಿ ಹಾಗೂ ತೋಟಗಾರಿಕೆಯಲ್ಲಿ ಅಭಿವೃದ್ಧಿ ಹೊಂದಿದ್ದನ್ನು ಸಹಿಸದ ವ್ಯಕ್ತಿಯೊಬ್ಬ, ಅಣ್ಣನ ಮನೆಯಿಂದ ಚಿನ್ನಾಭರಣ ಕಳವು ಮಾಡಿದ್ದ (house robbery) ಪ್ರಕರಣವನ್ನು ಭೇದಿಸಿರುವ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. 
ತಾಲೂಕಿನ ಹಿರೂರ ಗ್ರಾಮದಲ್ಲಿ ಫೆ.14ರಂದು ರೈತ ಮಹ್ಮದ್‌ಗೌಸ್ ಹಂಚಿನಮನಿ ಅವರ ಮನೆಯ ಹೆಂಚುಗಳನ್ನು ತೆಗೆದು 15 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣ ಕಳವು ಮಾಡಲಾಗಿತ್ತು. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನಟ್ಟಿದ ಹಾನಗಲ್ಲ ಪೊಲೀಸರು ಮೂರು ದಿನಗಳಲ್ಲಿ ಹಿರೂರ ಗ್ರಾಮದ ಮಹ್ಮದ್‌ಅಲಿ ಹಂಚಿನಮನಿ ಎಂಬಾತನನ್ನು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಈತ ತನ್ನ ಸಹೋದರನ ಮನೆಯಲ್ಲಿ ಕಳವು ಕೃತ್ಯ ನಡೆಸಿದ್ದ.
ಬಂಧಿತನಿಂದ 4.56 ಲಕ್ಷ ರೂ. ಮೌಲ್ಯದ 38 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 2.76 ಲಕ್ಷ ರೂ. ಮೌಲ್ಯದ 23 ಗ್ರಾಂ ಬಂಗಾರದ ನೆಕ್ಲೇಸ್, 96 ಸಾವಿರ ರೂ. ಮೌಲ್ಯದ 8 ಗ್ರಾಂ ಚಿನ್ನದ ಚೈನ್, 1.80 ಲಕ್ಷ ರೂ. ಮೌಲ್ಯದ 15 ಗ್ರಾಂ ಬಂಗಾರದ ಕಿವಿಯೋಲೆಗಳು, 1.80 ಲಕ್ಷ ರೂ. ಮೌಲ್ಯದ 15 ಗ್ರಾಂ ಬಂಗಾರದ ಸರ, 2.50 ಲಕ್ಷ ರೂ. ಮೌಲ್ಯದ 20 ಗ್ರಾಂ ತೂಕದ 9 ಬಂಗಾರದ ಉಂಗುರಗಳು, 24 ಸಾವಿರ ರೂ. ಮೌಲ್ಯದ 2 ಗ್ರಾಂ ತೂಕದ ಬಂಗಾರದ ಕಿವಿಯೋಲೆ, 35 ಸಾವಿರ ರೂ. ಮೌಲ್ಯದ 135 ಗ್ರಾಂ ತೂಕದ ಬೆಳ್ಳಿಯ ಕಾಲುಚೈನ್, 15 ಸಾವಿರ ರೂ. ಮೌಲ್ಯದ 70 ಗ್ರಾಂ ತೂಕದ ಬೆಳ್ಳಿಯ ಕಾಲುಚೈನ್, 31 ಸಾವಿರ ರೂ. ನಗದು ಸೇರಿದಂತೆ ಒಟ್ಟು 15.42 ಲಕ್ಷ ರೂ.ಗಳ ಸೊತ್ತನ್ನು ಹಾನಗಲ್ಲ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎಸ್‌ಪಿ ಯಶೋಧಾ ಒಂಟಿಗೋಡಿ, ಎಎಸ್‌ಪಿ ಎಲ್.ವೈ. ಶಿರಕೋಳ, ಡಿವೈಎಸ್‌ಪಿ ಕೆ.ವಿ. ಗುರುಶಾಂತಪ್ಪ, ಸಿಪಿಐ ಬಸವರಾಜ ಹಳಬಣ್ಣವರ ಮಾರ್ಗದರ್ಶನದಡಿ ಪಿಎಸ್‌ಐ ಸಂಪತ್ ಆನಿಕಿವಿ ನೇತೃತ್ವದಲ್ಲಿ ಸಿಬ್ಬಂದಿ ಪ್ರಶಾಂತ ಸೊರಟೂರ, ಇಲಿಯಾಸ್ ಶೇತಸನದಿ, ಬಾಹುಬಲಿ ಉಪಾಧ್ಯಾಯ, ನಾರಾಯಣ ಗುರ್ಕಿ, ಗುತ್ತೆಪ್ಪ ಬಾಸೂರ, ಭೀಮಣ್ಣ ಗೋಡಿಹಾಳ, ಸುರೇಶ ಕೂಸನೂರ, ಬಂಗಾರಪ್ಪ ಹುರಕಡ್ಲಿ, ಪರಶುರಾಮ ಯತ್ತಿನಹಳ್ಳಿ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net