

ಬಂಕಾಪುರ: ಯಾವುದೋ ವಾಹನ ಡಿಕ್ಕಿ ಹೊಡೆದುಕೊಂಡು ಹೋದ ಪರಿಣಾಮ ಬಾಲಕನೊಬ್ಬ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಎನ್ಎಚ್-48ರಲ್ಲಿ ನಡೆದಿದೆ.
ಪಟ್ಟಣದ ರಾಯಚೂರ ಓಣಿ ನಿವಾಸಿ ಮಹದ್ಮತಹಸೀನರಜಾ ಖಾದರಸಾಬ ಚೌದ್ರಿ (15) ಮೃತ ಬಾಲಕ.
ಈತ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಯಾವುದೋ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ಬಾಲಕ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.