ಅಕ್ರಮವಾಗಿ ಗೋ ಮಾಂಸ ಸಾಗಿಸುತ್ತಿದ್ದ ಆರೋಪಿಗಳು ಅಂದರ್

Crime
Crime
Published on

ಹಾವೇರಿ: ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿತರನ್ನು ಇಲ್ಲಿಯ ಗ್ರಾಮೀಣ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಣೆಬೆನ್ನೂರ ಸಿದ್ದೇಶ್ವರ ನಗರದ ಮಹ್ಮದ್ಸಲಿಂ ಅಬ್ದುಲಖಾದರ ಅದೋನಿ, ಮಹ್ಮದ್ ಜಾವೀದ ಅಬ್ದುಲಖಾದರ ಅದೋನಿ, ಜಬಿವುಲ್ಲಾ ಶಬ್ಬೀರಅಹ್ಮದ್ ಮುಲ್ಲಾ (42) ಬಂಧಿತ ಆರೋಪಿತರು.

ಇವರು ರಾಣೆಬೆನ್ನೂರ ನಗರದಲ್ಲಿ ತಮ್ಮ ಅಂಗಡಿಗಳಲ್ಲಿ ಜಾನುವಾರುಗಳನ್ನು ಹತ್ಯೆ ಮಾಡಿ ಅದರ ಮಾಂಸವನ್ನು ಸಾಗಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗ್ರಾಮೀಣ ಠಾಣೆ ಪೊಲೀಸರು ನಲೋಗಲ್ಲ ಬಳಿ ಆರೋಪಿತರನ್ನು ಬಂಧಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net