

ರಾಣೆಬೆನ್ನೂರು: ನವಜಾತ ಗಂಡು ಶಿಶುವನ್ನು ಬಾವಿಯಲ್ಲಿ ಬಿಸಾಡಿ ಹೋದ ಅಮಾನವೀಯ ಘಟನೆ ತಾಲೂಕಿನ ನಾಗೇನಹಳ್ಳಿಯಲ್ಲಿ ನಡೆದಿದೆ.
ಈ ಕುರಿತು ಆಶಾ ಕಾರ್ಯಕರ್ತೆ ಕರಿಯಮ್ಮ ಸಣ್ಣಹನುಮಗೌಡ್ರ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ.
ಯಾರೋ ದುಷ್ಕಮಿರ್ಗಳು ಗ್ರಾಮದ ಮುದ್ದಪ್ಪನಗರದ ಬಾವಿಯಲ್ಲಿ ನವಜಾತ ಗಂಡು ಶಿಶುವನ್ನು ಬಿಸಾಡಿ ಹೋಗಿದ್ದಾರೆ. ಇವರನ್ನು ಪತ್ತೆ ಮಾಡಿ ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.