ಟ್ರ್ಯಾಕ್ಟರ್ ನ ಟ್ರೈಲರ್ ಗೆ ಬೈಕ್ ಡಿಕ್ಕಿಯಾಗಿ ಸವಾರ ದುರ್ಮರಣ

Crime
Crime
Published on

ರಾಣೆಬೆನ್ನೂರ: ಟ್ರ್ಯಾಕ್ಟರ್ ನ ಟ್ರೈಲರ್ ಗೆ ಬೈಕ್ ಡಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ತಾಲೂಕಿನ ಮಾಕನೂರ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ನಿಪ್ಪನ್ಯಾಳ ಗ್ರಾಮದ ಮಲಕಾರಿ ಈರಪ್ಪ ಮಿಸಿ (41) ಮೃತ ವ್ಯಕ್ತಿ.

ಈತ ಕುರಿ ಕಾಯುವ ನಿಮಿತ್ತ ಮಾಕನೂರ ಬಳಿ ಬಂದಿದ್ದ. ಈ ಸಮಯದಲ್ಲಿ ಬೈಕ್ ಮೇಲೆ ತೆರಳುತ್ತಿದ್ದ ಸಮಯದಲ್ಲಿ ಟ್ರ್ಯಾಕ್ಟರ್ ನ ಟ್ರೈಲರ್ ಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಈ ಕುರಿತು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net