ಯಾವುದೋ ವಾಹನ ಡಿಕ್ಕಿಯಾಗಿ ಬೈಕ್ ಸವಾರ ದುರ್ಮರಣ

Crime
Crime
Published on

ರಾಣೆಬೆನ್ನೂರು: ಯಾವುದೋ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ನಗರದ ಹೊರವಲಯದ ನೂಲಿನ ಗಿರಣಿ ಬಳಿ ನಡೆದಿದೆ.

ತಾಲೂಕಿನ ದೇವಗೊಂಡನಕಟ್ಟಿ ಗ್ರಾಮದ ಪ್ರಕಾಶ ಹನುಮಂತಪ್ಪ ಅಂಗಡಿ (25) ಮೃತ ಬೈಕ್ ಸವಾರ.

ಈತ ರಾಣೆಬೆನ್ನೂರು ಕಡೆಯಿಂದ ಹುಣಸಿಕಟ್ಟೆಗೆ ತೆರಳುತ್ತಿದ್ದ ಸಮಯದಲ್ಲಿ ಯಾವುದೋ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾನೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net