ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಸಾವು

Crime
Crime
Published on

ರಟ್ಟಿಹಳ್ಳಿ: ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಮೃತಪಟ್ಟ ಘಟನೆ ತಾಲೂಕಿನ ಬೈರಂಪಾದ ಬಳಿ ನಡೆದಿದೆ.

ಹಳ್ಳೂರು ಗ್ರಾಮದ ಹರೀಶ ರೇವಣೆಪ್ಪ ಹರಿಜನ (40) ಮೃತ ಬೈಕ್ ಸವಾರ.

ಇವರು ಬೈಕ್ ಮೇಲೆ ತೆರಳುತ್ತಿದ್ದ ಸಮಯದಲ್ಲಿ ದಾರಿ ಮಧ್ಯೆ ಎಮ್ಮೆ ಅಡ್ಡ ಬಂದಿದ್ದರಿಂದ ಬೈಕ್ ಸ್ಕಿಡ್ ಆಗಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net