

ಹಾನಗಲ್ಲ: ಬೈಕ್ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಪಟ್ಟಣದ ತಡಸ-ಗೊಂದಿ ರಸ್ತೆಯಲ್ಲಿ ನಡೆದಿದೆ.
ಮಹದೇವಗೌಡ ಕರಬಸಗೌಡ ಪಾಟೀಲ ಮೃತಪಟ್ಟ ವ್ಯಕ್ತಿ. ಬೈಕ್ ಸವಾರ ಸೈಯದ್ಬೇಗ ಗಫಾರಬೇಗ್ ಸವಣೂರ (23) ಬೈಕ್ ಡಿಕ್ಕಿ ಪಡಿಸಿದ ಆರೋಪಿ.
ಈತ ಬೈಕ್ಅನ್ನು ಅತಿ ಜೋರಾಗಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಮಹದೇವಗೌಡನಿಗೆ ಡಿಕ್ಕಿ ಪಡಿಸಿದ್ದಾನೆ. ಇದರಿಂದ ಆತ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.