ರೋಡ್ ಪಂಪ್ಸ್ ನಿಂದಾಗಿ ಬಿದ್ದು ಬೈಕ್ ಸವಾರ ದುರ್ಮರಣ

Crime
Crime
Published on

ರಟ್ಟಿಹಳ್ಳಿ: ರೋಡ್ ಪಂಪ್ಸ್ ನಿಂದಾಗಿ ಬೈಕ್ ಸವಾರನೊಬ್ಬ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಪುರದಗೇರೆ ಗ್ರಾಮದ ಬಳಿ ನಡೆದಿದೆ.

ದಾವಣಗೆರೆ ಜಿಲ್ಲೆ ಹೊನ್ನಾಳಿಯ ಗಿಡ್ಡಪ್ಪ ಬಡಾವಣೆ ನಿವಾಸಿ ಮೊಹಮ್ಮದಗೌಸ ನಜೀರಸಾಬ್ (42) ಮೃತ ಬೈಕ್ ಸವಾರ.

ಈತ ಬೈಕ್ ಮೇಲೆ ತುಮ್ಮಿನಕಟ್ಟಿಯಿಂದ ರಟ್ಟಿಹಳ್ಳಿಗೆ ತೆರಳುತ್ತಿದ್ದ ಸಮಯದಲ್ಲಿ ರಸ್ತೆ ಮೇಲೆ ಹಾಕಿದ್ದ ಪಂಪ್ಸ್ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಆತನನ್ನು ಚಿಕಿತ್ಸೆಗಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net