ಬೈಕ್ ನಿಂದ ಬಿದ್ದು ಸವಾರ ದುರ್ಮರಣ

Crime
Crime
Published on

ರಾಣೆಬೆನ್ನೂರು: ರಸ್ತೆ ಬದಿ ಗಟಾರಿನ ಕಟ್ಟೆಗೆ ಬೈಕ್ ಡಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ನಗರದ ಹೊರವಲಯದ ಮಾಗೋಡ ರಸ್ತೆಯಲ್ಲಿ ನಡೆದಿದೆ.

ತಾಲೂಕಿನ ಮೇಡ್ಲೇರಿ ಗ್ರಾಮದ ಶಿವಕುಮಾರ ಹೊನ್ನಪ್ಪ ಭೋವಿ (29) ಮೃತ ಬೈಕ್ ಸವಾರ.

ಈತ ರಾಣೆಬೆನ್ನೂರ ನಗರದಿಂದ ಮಾಗೋಡ ಕಡೆಗೆ ತೆರಳುತ್ತಿದ್ದ ಸಮಯದಲ್ಲಿ ರಸ್ತೆ ಬದಿಯ ಗಟಾರಿನ ಕಟ್ಟೆಗೆ ಬೈಕ್ ಡಿಕ್ಕಿಯಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net