

ಬ್ಯಾಡಗಿ: ಮಟನ್ ತೆಗೆದುಕೊಳ್ಳಲು ಹೋದ ದಂಪತಿಯ ಬೈಕ್ನ ಬ್ಯಾಗ್ನಲ್ಲಿದ್ದ 1.30 ಲಕ್ಷ ರೂ. ಹಣವನ್ನು ಯಾರೋ ದೋಚಿರುವ ಘಟನೆ ಪಟ್ಟಣದ ಪೋಸ್ಟ್ ಆಫೀಸ್ ಬಳಿ ನಡೆದಿದೆ.
ತಾಲೂಕಿನ ತಡಸ ಗ್ರಾಮದ ದುರಗಪ್ಪ ಕಾಳೇರ ಎಂಬುವರ ಹಣ ದೋಚಿರುವುದು.
ಇವರು ಬ್ಯಾಂಕ್ನಲ್ಲಿ ಹಣ ಡ್ರಾ ಮಾಡಿಸಿಕೊಂಡು ಬಂದು ಬೈಕ್ನ ಸೈಡ್ ಬ್ಯಾಗ್ನಲ್ಲಿಟ್ಟುಕೊಂಡಿದ್ದರು. ನಂತರ ಮಟನ್ ತರುವ ಸಲುವಾಗಿ ಮಾರುಕಟ್ಟೆಗೆ ಹೋದಾಗ ಯಾರೋ ಆರೋಪಿತರು ಹಣ ತೆಗೆದುಕೊಂಡು ಹೋಗಿದ್ದಾರೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.