ಬೈಕ್ ಬೈಕ್ ಡಿಕ್ಕಿಯಾಗಿ ಓರ್ವ ದುರ್ಮರಣ

Crime
Crime
Published on

ಹಿರೇಕೆರೂರ: ಬೈಕ್ ಗೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ತಾಲೂಕಿನ ಹಂಸಬಾವಿ ರಸ್ತೆಯಲ್ಲಿ ನಡೆದಿದೆ.

ಹಾವೇರಿ ನಗರದ ಮುಲ್ಲಾ ಓಣಿ ನಿವಾಸಿ ರಮೇಶ ಬೀರಪ್ಪ ದೇಸಳ್ಳಿ (25) ಮೃತ ವ್ಯಕ್ತಿ.

ಈತ ಬೈಕ್ ಮೇಲೆ ಹಂಸಬಾವಿ ಕಡೆಯಿಂದ ಹಿರೇಕೆರೂರಿಗೆ ತೆರಳುತ್ತಿದ್ದ ಸಮಯದಲ್ಲಿ ಮತ್ತೊಂದು ಬೈಕ್ ಬಂದು ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ರಮೇಶನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಈ ಕುರಿತು ಹಂಸಬಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net