ಬೈಕ್ ನಿಂದ ಬಿದ್ದು ಮಹಿಳೆ ದುರ್ಮರಣ

Crime
Crime
Published on

ಸವಣೂರ: ಚಲಿಸುತ್ತಿದ್ದ ಬೈಕ್ನಿಂದ ಬಿದ್ದು ಮಹಿಳೆ ಮೃತಪಟ್ಟ ಘಟನೆ ತಾಲೂಕಿನ ಮಂತ್ರೋಡಿ ಗ್ರಾಮದ ಬಳಿ ನಡೆದಿದೆ.

ಗ್ರಾಮದ ಚನ್ನಬಸವ್ವ (ಸೌಮ್ಯ) ಫಕ್ಕೀರೇಶ ಕಳಲಕೊಂಡ ಮೃತ ಮಹಿಳೆ.

ಇವರು ಪಕ್ಕೀರೇಶ ಎಂಬುವರೊಂದಿಗೆ ಬೈಕ್ನಲ್ಲಿ ಹಿಂದೆ ಕುಳಿತು ಜೇಕಿನಕಟ್ಟಿ ಗ್ರಾಮದಿಂದ ಮಂತ್ರೋಡಿಗೆ ತೆರಳುತ್ತಿದ್ದರು. ಈ ಸಮಯದಲ್ಲಿ ಬೈಕ್ನಿಂದ ಬಿದ್ದು ಚನ್ನಬಸವ್ವ ಮೃತಪಟ್ಟಿದ್ದಾರೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net