ಆದಾಯ ಮೂಲ ಕಂಡುಕೊಳ್ಳಲಿ

ಹಾನಗಲ್ ಹೊಸ ಬಸ್ ನಿಲ್ದಾಣದ ಬಳಿ 48 ಲಕ್ಷ ರೂ. ವೆಚ್ಚದಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು. ಪರಶುರಾಮ ಖಂಡೂನವರ, ಖುರ್ಷಿದ್ ಹುಲ್ಲತ್ತಿ, ರಾಧಿಕಾ ದೇಶಪಾಂಡೆ ಇತರರಿದ್ದರು.
ಹಾನಗಲ್ ಹೊಸ ಬಸ್ ನಿಲ್ದಾಣದ ಬಳಿ 48 ಲಕ್ಷ ರೂ. ವೆಚ್ಚದಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು. ಪರಶುರಾಮ ಖಂಡೂನವರ, ಖುರ್ಷಿದ್ ಹುಲ್ಲತ್ತಿ, ರಾಧಿಕಾ ದೇಶಪಾಂಡೆ ಇತರರಿದ್ದರು.
Published on
ಹಾನಗಲ್: ನಗರ ಬೆಳೆದಂತೆ ಸಾರ್ವಜನಿಕರ ನೆಮ್ಮದಿಯ ಬದುಕಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವ ಸವಾಲನ್ನು ಪುರಸಭೆ ಎದುರಿಸಬೇಕಿದೆ. ಹಾಗಾಗಿ ಆದಾಯದ ಮೂಲಗಳನ್ನು ಕಂಡುಕೊಂಡರೆ ಹೆಚ್ಚು ಅನುಕೂಲ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿ ಪುರಸಭೆಯ ವತಿಯಿಂದ 48 ಲಕ್ಷ ರೂ. ವೆಚ್ಚದಲ್ಲಿ ವಾಣಿಜ್ಯ ಮಳಿಗೆಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, 15ನೇ ಹಣಕಾಸಿನ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡದಿರುವುದರಿಂದ ಆರ್ಥಿಕ ಸಂಕಷ್ಟ ಉಂಟಾಗಿದೆ. ಸಾರ್ವಜನಿಕರು ನಿಗದಿತ ಸಮಯಕ್ಕೆ ಕರ ಭರಿಸುವ ಮೂಲಕ ಸ್ವಚ್ಛ, ಸುಂದರ ನಗರ ನಿರ್ಮಾಣಕ್ಕೆ ಕೈ ಜೋಡಿಸಬೇಕಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಪರಶುರಾಮ ಖಂಡೂನವರ, ಖುರ್ಷಿದ್ ಹುಲ್ಲತ್ತಿ, ರಾಧಿಕಾ ದೇಶಪಾಂಡೆ, ನಾಗಪ್ಪ ಸವದತ್ತಿ, ಮಮತಾ ಆರೆಗೊಪ್ಪ, ಮಾಜಿ ಉಪಾಧ್ಯಕ್ಷೆ ವೀಣಾ ಗುಡಿ, ಮಾಜಿ ಸದಸ್ಯ ವಿರುಪಾಕ್ಷಪ್ಪ ಕಡಬಗೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ಆದರ್ಶ ಶೆಟ್ಟಿ, ರವಿ ದೇಶಪಾಂಡೆ, ಮೇಕಾಜಿ ಕಲಾಲ, ದುದ್ದು ಅಕ್ಕಿವಳ್ಳಿ, ಸಿಕಂದರ್ ವಾಲಿಕಾರ, ರಾಜಕುಮಾರ ಶಿರಪಂಥಿ, ದಿನೇಶ ಕಲಾಲ, ಮಾಲತೇಶ ಕಾಳೇರ, ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಸುರೇಶ ನಾಗಣ್ಣನವರ, ಶಿವು ಭದ್ರಾವತಿ, ತಮ್ಮಣ್ಣ ಆರೆಗೊಪ್ಪ, ನಿಯಾಜ್ ಸರ್ವಿಕೇರಿ, ನಿಸಾರ್‌ಅಹ್ಮದ್ ಬಡಗಿ, ಜಾಫರ್ ಬಾಳೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net