ಫೆಸ್ ಬುಕ್ ಜಾಹೀರಾತು ನಂಬಿ 30.99 ಲಕ್ಷ ರೂ. ಕಳೆದುಕೊಂಡ ನಿವೃತ್ತ ಬ್ಯಾಂಕ್ ಮ್ಯಾನೇಜರ್

Crime
Crime
Published on

ಹಾವೇರಿ: 10 ಲಕ್ಷ ಡಾಲರ್ ಬಹುಮಾನಕ್ಕಾಗಿ ನನಗೆ ಮತ ನೀಡಿ ಎಂದು ಇರುವ ಜಾಹೀರಾತು ನಂಬಿದ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರೊಬ್ಬರಿಗೆ ಬರೋಬ್ಬರಿ 30.99 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿಯ ಸೈಬರ್ ಕೆಂ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.

ಇಲ್ಲಿಯ ಬಸವೇಶ್ವರ ನಗರದ ನಿವಾಸಿ ಶಂಕರಯ್ಯ ಶಿವಮೂರ್ತಯ್ಯ ಹಿರೇಮಠ (71) ಎಂಬುವರಿಗೆ ವಂಚಿಸಿರುವುದು.

ಇವರು ಫೆಸ್ಬುಕ್ನಲ್ಲಿ ಜಾಹೀರಾತು ನೋಡುತ್ತಿದ್ದಾಗ ರಾಜೇಶ ಮೋದಿ ಎಂಬ ವ್ಯಕ್ತಿ "ಗ್ಲೋಬಲ್ ಫೈನಾನ್ಸಿಯಲ್ ಗ್ರಾ$ಂಡ್ ಮಾಸ್ಟರ್ ಕಪ್' ಸ್ಪರ್ಧೆಯ ಭಾರತ ಅಭ್ಯಥಿರ್ ಎಂದು ಪರಿಚಯಿಸಿಕೊಂಡಿದ್ದಾನೆ. ನಂತರ ನನಗೆ 10 ಲಕ್ಷ ಡಾಲರ್ ಬಹುಮಾನದ ಮೊತ್ತಕ್ಕಾಗಿ ಮತ ಚಲಾಯಿಸುವಂತೆ ಶಂಕರಯ್ಯ ಅವರ ವಾಟ್ಸ್ಅಪ್ ನಂಬರ್ ಪಡೆದು ಆ ನಂಬರ್ಅನ್ನು "ನ್ಯೂವ್ ಬೇರಿ 333 ಸ್ಟಾ$ಟಜಿರ್ ವರ್ಕಶೀಪ್' ಎಂಬ ಗ್ರುಪ್ನಲ್ಲಿ ಸೇರಿಸಿದ್ದಾನೆ. ಆಗ ಇದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರಲಿದೆ ಎಂದು ನಂಬಿಸಿ 30.99 ಲಕ್ಷ ರೂ. ಹಾಕಿಸಿಕೊಂಡು ಮೋಸ ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net