

ರಾಣೆಬೆನ್ನೂರು: ಕಳಪೆ ಗುಣಮಟ್ಟದ ಕೇಕ್ ವಿತರಣೆ ಬೇಕರಿವೊಂದಕ್ಕೆ ನಗರಸಭೆ ಅಧಿಕಾರಿಗಳು ಬುಧವಾರ ಬೀಗ ಮುದ್ರೆ ಹಾಕಿದ್ದಾರೆ.
ನಗರದ ಚೌಡೇಶ್ವರಿ ಬಡಾವಣೆ ಬಳಿವಿರುವ ಗೋಲ್ಡನ್ ಕೇಕ್ ಬೇಕರಿಗೆ ಬೀಗ ಮುದ್ರೆ ಹಾಕಿರುವುದು.
ಇವರು ಗ್ರಾಹಕರಿಗೆ ಬೂಳಸು ಬಂದಿರುವ ಕೇಕ್ ವಿತರಣೆ ಮಾಡಿದ್ದರು. ಈ ಕುರಿತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೂಡಲೇ ಎಚ್ಚೇತ್ತ ನಗರಸಭೆ ಆಯುಕ್ತ ಕ್ಕೀರಪ್ಪ ಇಂಗಳಗಿ ಬೇಕರಿಗೆ ಭೇಟಿ ನೀಡಿ ಪರಿಶೀಲಿಸಿ, ಬೀಗ ಮುದ್ರೆ ಹಾಕಿದ್ದಾರೆ.