ಆಟೋರಿಕ್ಷಾ ನಿಲ್ದಾಣಗಳಿಗೆ ಮೇಲ್ಛಾವಣಿ ನಿರ್ಮಿಸಿಕೊಡಿ

ಮನವಿ ಸಲ್ಲಿಕೆ
ಮನವಿ ಸಲ್ಲಿಕೆ
Published on

ರಾಣೆಬೆನ್ನೂರು: ನಗರದ ಎಲ್ಲ ಆಟೋರಿಾ ನಿಲ್ದಾಣಗಳಿಗೆ ಬಿಸಿಲು ಮತ್ತು ಮಳೆಯಿಂದ ಸುರಕ್ಷಿತವಾಗಿರಲು ಮೇಲ್ಛಾವಣಿ ನಿಮಿರ್ಸಿಕೊಡಬೇಕು ಎಂದು ಒತ್ತಾಯಿಸಿ ನಗರದ ಆಟೋರಿಕ್ಷಾ ಚಾಲಕರ ಸಂದ ವತಿಯಿಂದ ಬುಧವಾರ ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಮನವಿ ಸಲ್ಲಿಸಲಾಯಿತು.

ಆಟೋರಿಾ ಚಾಲಕರ ಸಂದ ಗೌರವ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಮಾತನಾಡಿ, ನಗರದಲ್ಲಿ ನಿತ್ಯವೂ 2500 ಆಟೋರಿಕ್ಷಾಗಳು ಪ್ರಯಾಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವ್ಯಾಪಕವಾದ ಬಿಸಿಲಿನ ತಾಪಮಾನದಿಂದ ಆಟೋರಿಾದವರು ಬೇಸತ್ತು ಹೋಗಿದ್ದಾರೆ.

ಅವರ ನಿಲ್ದಾಣಗಳಿಗೆ ಮೇಲ್ಛಾವಣಿ ಇಲ್ಲದ ಕಾರಣ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ನಗರದ ಎಲ್ಲ ಆಟೋರಿಾ ಚಾಲಕರಿಗೆ ಮೇಲ್ಛಾವಣಿ ನಿಮಿರ್ಸಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ರಮೇಶ ಕೆಂಪಹನುಮಣ್ಣನವರ, ವಿನಯ ಚನ್ನಪ್ಪನವರ, ಮನೋಜ್ ಎಚ್., ರಮೇಶ ಪೂಜಾರ, ವೀರೇಶ ಬಳ್ಳಾರಿ, ಮಂಜುಣ್ಣ ಗಳಗನಾಥ, ಉಮೇಶ ತಿಳುವಳ್ಳಿ, ರಾಜು ಓಲೇಕಾರ, ಅಣ್ಣಪ್ಪ ಕೆ., ರವಿ ಕೆರೂಡಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net