ಆಟೋರೀಕ್ಷಾ ಬೈಕ್ ಡಿಕ್ಕಿ; ಓರ್ವ ದುರ್ಮರಣ

Crime
Crime
Published on

ರಾಣೆಬೆನ್ನೂರ: ಆಟೋರಿಕ್ಷಾ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾ ಪಲ್ಟಿಯಾಗಿ ಅದರಲ್ಲಿದ್ದ ವ್ಯಕ್ತಿ ಮೃತಪಟ್ಟ ಘಟನೆ ತಾಲೂಕಿನ ಅಸುಂಡಿ-ಹುಲಿಹಳ್ಳಿ ರಸ್ತೆಯಲ್ಲಿ ನಡೆದಿದೆ.

ಅಸುಂಡಿಯ ರಾಜಾಭಕ್ಷಿ ಪೀರಸಾಬ ಬಿದರಿ ಮೃತ ವ್ಯಕ್ತಿ.

ಇವರು ಆಟೋರಿಕ್ಷಾದಲ್ಲಿ ಅಸುಂಡಿಯಿಂದ ಹುಲಿಹಳ್ಳಿ ಕಡೆಗೆ ಬರುತ್ತಿದ್ದರು. ಈ ಸಮಯದಲ್ಲಿ ಆಟೋರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಇದರಿಂದ ರೀಕ್ಷಾ ಪಲ್ಟಿಯಾಗಿ ರಾಜಾಭಕ್ಷಿ ಮೃತಪಟ್ಟಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net