leopard ಚಿರತೆ ದಾಳಿಗೆ ಮೃತಪಟ್ಟ ರೈತನ ಕುಟುಂಬಕ್ಕೆ ನೆರವು

ಚಿರತೆ ದಾಳಿಯಿಂದ ಮೃತಪಟ್ಟ ರೈತ ಬೀರಪ್ಪ ಬಳಗಾವಿ ಅವರ ತಾಯಿ ರೇಣುಕಮ್ಮ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮತ್ತು ಶಾಸಕರು ಯು.ಬಿ. ಬಣಕಾರ ಅವರು ಸರ್ಕಾರದ 10 ಲಕ್ಷ ರೂ. ಪರಿಹಾರ ಆದೇಶ ಪತ್ರ ವಿತರಿಸಿದರು.
ಚಿರತೆ ದಾಳಿಯಿಂದ ಮೃತಪಟ್ಟ ರೈತ ಬೀರಪ್ಪ ಬಳಗಾವಿ ಅವರ ತಾಯಿ ರೇಣುಕಮ್ಮ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮತ್ತು ಶಾಸಕರು ಯು.ಬಿ. ಬಣಕಾರ ಅವರು ಸರ್ಕಾರದ 10 ಲಕ್ಷ ರೂ. ಪರಿಹಾರ ಆದೇಶ ಪತ್ರ ವಿತರಿಸಿದರು.
Published on
ರಟ್ಟಿಹಳ್ಳಿ: ತಾಲೂಕಿನ ಕಣವಿಸಿದ್ದಗೇರಿ ಗ್ರಾಮದಲ್ಲಿ ಇತ್ತೀಚೆಗೆ ಚಿರತೆ ದಾಳಿಯಿಂದ ಮೃತಪಟ್ಟ ರೈತ ಬೀರಪ್ಪ ಬಳಗಾವಿ ಅವರ ತಾಯಿ ರೇಣುಕಮ್ಮ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಸರ್ಕಾರದ 10 ಲಕ್ಷ ರೂ. ಪರಿಹಾರದ ಆದೇಶ ಪತ್ರವನ್ನು ಸೋಮವಾರ ವಿತರಿಸಿದರು.
ಬ್ಯಾಡಗಿ ಪಟ್ಟಣದಲ್ಲಿ ಬೀರಪ್ಪ ಬಳಗಾವಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು, ಈಗಾಗಲೇ ಶಾಸಕ ಯು.ಬಿ. ಬಣಕಾರ ಅವರು ಸರ್ಕಾರದಿಂದ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಿದ್ದಾರೆ. ಇದೀಗ 10 ಲಕ್ಷ ರೂ. ಸೇರಿ ಒಟ್ಟು 20 ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಶಾಸಕ ಯು.ಬಿ. ಬಣಕಾರ ಮಾತನಾಡಿ, ಚಿರತೆ ದಾಳಿಗೆ ಯುವ ರೈತ ಬೀರಪ್ಪ ಬಳಗಾವಿ ಮೃತಪಟ್ಟಿರುವುದು ತುಂಬಾ ದುಃಖ ತಂದಿದೆ. ಮೃತರ ಕುಟುಂಬಕ್ಕೆ 5 ವರ್ಷದವರೆಗೆ ಪ್ರತಿ ತಿಂಗಳು ಸರ್ಕಾರದಿಂದ ಮಾಸಾಶನ 4 ಸಾವಿರ ರೂಪಾಯಿ ನೀಡಲಾಗುವುದು ಎಂದು ಹೇಳಿದರು.
ವಲಯ ಅರಣ್ಯಾಧಿಕಾರಿ ವಿಜಯ ಮುಡಬಾಗಿಲು, ರೇಣುಕಮ್ಮ ಬಳಗಾವಿ, ಗಣೇಶ ಬಳಗಾವಿ, ಶಿವಪುತ್ರಪ್ಪ ಕರಿಯಣ್ಣನವರ, ಪರಸಪ್ಪ ಪುಟ್ಟಪ್ಪಕ್ಕಳವರ, ಬೀರೇಶ ಕರಡೆಣ್ಣನವರ, ಫಕೀರೇಶ ತುಮ್ಮಿನಕಟ್ಟಿ, ಬೆಳಕೇರಿ ಸಣ್ಣಪ್ಪನವರ, ಮಾಲತೇಶ ಯತ್ತಿನಹಳ್ಳಿ, ರಾಘವೇಂದ್ರ ಬಳಗಾವಿ, ಬೀರೇಶ ಬಳಗಾವಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net