

3 ಎಕರೆ ಜಮೀನಿನಲ್ಲಿ ಅಡಿಕೆ ಸಸಿ ನೆಟ್ಟು ನಾಲ್ಕು ವರ್ಷವಾಗಿದ್ದು, ಗಿಡಗಳು ಫಸಲಿಗೆ ಬಂದಿವೆ. ಪ್ರತಿ ಎಕರೆಗೂ 3 ಲಕ್ಷ ರೂ. ಲಾಭದ ನಿರೀಕ್ಷೆಯಿದೆ. ತೋಟದ ಮಧ್ಯೆ ಅರಿಷಿನ, ಶುಂಠಿ, ತೊಗರಿ, ಚೆಂಡು ಹೂವಿನ ಬೆಳೆಯುತ್ತಿದ್ದೇವೆ. ಅಡಿಕೆ ಜತೆಗೆ ಮಿಶ್ರಬೆಳೆ ಪದ್ಧತಿ ಅಳವಡಿಸಿಕೊಂಡಲ್ಲಿ ಅಲ್ಪಭೂಮಿಯಲ್ಲಿ ಹೆಚ್ಚು ಲಾಭ ಗಳಿಸಬಹುದು.
| ಹೇಮಂತ ಶೆಟ್ರ, ಪ್ರಗತಿಪರ ರೈತ- ಬಿಸಲಹಳ್ಳಿ ಗ್ರಾಮ
ರೈತರು ಅಡಿಕೆ ಸೇರಿದಂತೆ ವಿವಿಧ ವಾಣಿಜ್ಯ ಬೆಳೆಯತ್ತ ಮುಖ ಮಾಡಿದ್ದಾರೆ. ಇಲಾಖೆಯಿಂದ ಸಹಾಯಧನ, ಬೆಳೆ ವಿಮೆ, ಪ್ರೋತ್ಸಾಹಧನ, ಹನಿ ನೀರಾವರಿ ಸೇರಿದಂತೆ ಹಲವು ಸೌಲಭ್ಯಗಳಿವೆ. ಇಲಾಖೆ ಎಲ್ಲ ನೆರವು ನೀಡುವ ಮೂಲಕ ಸಲಹೆ, ಮಾರ್ಗದರ್ಶನ ನೀಡುತ್ತಿದೆ.
| ಅಶೋಕ ಕುರುಬರ, ಸಹಾಯಕ ತೋಟಗಾರಿಕೆ ನಿರ್ದೇಶಕ ಬ್ಯಾಡಗಿ