Valmiki ವಾಲ್ಮೀಕಿ ಸಮುದಾಯ ಭವನಕ್ಕೆ ಅನುದಾನ ನೀಡಲು ಮನವಿ

ರಟ್ಟಿಹಳ್ಳಿ ಪಟ್ಟಣದಲ್ಲಿ ವಾಲ್ಮೀಕಿ (Valmiki )ನಾಯಕ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಡಬೇಕೆಂದು ಶಾಸಕ ಯು.ಬಿ.ಬಣಕಾರ ಅವರಿಗೆ ಮನವಿ ಸಲ್ಲಿಸಲಾಯಿತು.
ರಟ್ಟಿಹಳ್ಳಿ ಪಟ್ಟಣದಲ್ಲಿ ವಾಲ್ಮೀಕಿ (Valmiki )ನಾಯಕ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಡಬೇಕೆಂದು ಶಾಸಕ ಯು.ಬಿ.ಬಣಕಾರ ಅವರಿಗೆ ಮನವಿ ಸಲ್ಲಿಸಲಾಯಿತು.
Published on
ರಟ್ಟಿಹಳ್ಳಿ: ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ಅವರಿಗೆ ತಾಲೂಕು ವಾಲ್ಮೀಕಿ Valmiki ನಾಯಕ ಸಮಾಜದವರು ಮನವಿ ಸಲ್ಲಿಸಿದರು.
ಸಂದ ಅಧ್ಯ ಮಂಜುನಾಥ ತಳವಾರ ಮಾತನಾಡಿ, ಪಟ್ಟಣದ ಅಂಬೇಡ್ಕರ್​ ಭವನದ ಪಕ್ಕದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಾಗ ಮೀಸಲಿಡಲಾಗಿದೆ. ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದರು.
ಮನವಿ ಸ್ವೀಕರಿಸಿದ ಶಾಸಕರು, ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಪಪಂ ಸದಸ್ಯ ರವಿ ಹದಡೇರ, ಹನುಮಂತಪ್ಪ ದೀವಗಿಹಳ್ಳಿ, ರಾಮಚಂದ್ರಪ್ಪ ವಾಲ್ಮೀಕಿ, ಕರಿಯಪ್ಪ ಚೌಡಕ್ಕನವರ, ಅಶೋಕ ಹೆಡಿಯಾಳ, ಎ.ಆರ್​. ಮಣಕೂರ, ಮಂಜು ತಳವಾರ, ಸಿದ್ದಣ್ಣ ಕಾಗೇರ, ಬಸವರಾಜ, ಸುರೇಶ ತಳವಾರ, ನಾಗರಾಜ ಬಳ್ಳಾರಿ, ಕುಮಾರ ಮೇದೂರು, ಶಿವಕುಮಾರ ದೀವಗಿಹಳ್ಳಿ, ಕರಬಸಪ್ಪ ನಾಗೇನಹಳ್ಳಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net