ಜಮೀನು ರಸ್ತೆಗಳ ಅಭಿವೃದ್ಧಿಗೆ ಮನವಿ-Land roads

ರಟ್ಟಿಹಳ್ಳಿ ತಾಲೂಕಿನ ಅಂಗರಗಟ್ಟಿ ಗ್ರಾಮಸ್ಥರು (Land roads) ತಡಕನಹಳ್ಳಿ ಗ್ರಾಪಂ ಪಿಡಿಒ ಯೋಗೀಶ ಕತ್ತಗಿ ಅವರಿಗೆ ಮನವಿ ಸಲ್ಲಿಸಿದರು. ಚಿದಾನಂದ ಅಂಗರಗಟ್ಟಿ, ಶಿವಾನಂದಪ್ಪ ನಾಗವಂದ, ಪರಮೇಶಪ್ಪ ಬೆಳಗುತ್ತಿ, ಹೊಳಗೌಡ ಬೆಳ್ಳೂರು, ಚನ್ನಪ್ಪ ಯಾಲಕ್ಕಿ ಇತರರು ಇದ್ದರು.

Published on
ರಟ್ಟಿಹಳ್ಳಿ: ತಾಲೂಕಿನ ಅಂಗರಗಟ್ಟಿ ಗ್ರಾಮದ ಅನೇಕ ಜಮೀನುಗಳಿಗೆ ಹೋಗುವ ದಾರಿಗಳನ್ನು (Land roads) ಸರಿಪಡಿಸಿ, ವ್ಯವಸ್ಥಿತ ರಸ್ತೆಗಳನ್ನು ನಿರ್ಮಾಣ ಮಾಡಬೇಕು. ಇಲ್ಲವಾದರೆ ಮುಂಬರುವ ಗ್ರಾಪಂ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ತಡಕನಹಳ್ಳಿ ಗ್ರಾಪಂ ಪಿಡಿಒ ಯೋಗೀಶ ಕತ್ತಗಿ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಗ್ರಾಮಸ್ಥ ಚಿದಾನಂದ ಅಂಗರಗಟ್ಟಿ ಮಾತನಾಡಿ, ಗ್ರಾಮದಲ್ಲಿ ಮಾಸೂರು ಓಣಿ, ನೀರಲಗಿ ಓಣಿ, ಗುಡ್ಡದ ಓಣಿ ಈ ಮೂರು ಓಣಿಗಳಿಂದ ಜಮೀನುಗಳಿಗೆ ತೆರಳುವ ರಸ್ತೆಗಳು ಸಂಪೂರ್ಣವಾಗಿ ಕಚ್ಚಾ ಇವೆ. ಮಳೆಗಾಲದಲ್ಲಿ ಈ ಕಚ್ಚಾ ರಸ್ತೆಗಳಲ್ಲಿ ರೈತರು ಓಡಾಡಲು ತುಂಬಾ ತೊಂದರೆ ಅನುಭವಿಸಬೇಕಾಗಿದೆ. ಕೂಡಲೇ ಈ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಇಲ್ಲವಾದರೆ ಮುಂಬರು ಗ್ರಾಪಂ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net