ಎಪಿಎಂಸಿ ಅಂಗಡಿಗಳಿಗೆ ಅಧಿಕಾರಿಗಳ ಭೇಟಿ, ಪರಿಶೀಲನೆ

ಅಧಿಕಾರಿಗಳಿಂದ ಪರಿಶೀಲನೆ
ಅಧಿಕಾರಿಗಳಿಂದ ಪರಿಶೀಲನೆ
Published on

ರಾಣೆಬೆನ್ನೂರು: ನಗರದ ಹಳೇ ಪಿ.ಬಿ. ರಸ್ತೆಯಲ್ಲಿರುವ ಅನಧಿಕೃತ ಮಾರುಕಟ್ಟೆ ಸ್ಥಳಾಂತರಕ್ಕೆ ಎಪಿಎಂಸಿ ಆದೇಶಿಸಿದ ಹಿನ್ನೆಲೆಯಲ್ಲಿ ಎಪಿಎಂಸಿ ಅಧಿಕಾರಿಗಳು ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಮಯದಲ್ಲಿ ಕೆಲವು ಅಂಗಡಿಗಳ ಎದುರು ಇದ್ದ ನಾಮಲಕ ತೆರವುಗೊಳಿಸಿದರು. ಕೆಲವರು ಅಂಗಡಿಗಳಲ್ಲಿ ಇಟ್ಟುಕೊಂಡಿದ್ದ ಕಾಳು ಕಡಿಗಳನ್ನು ತೆರವುಗೊಳಿಸಿದರು. ಎಲ್ಲರೂ ಇನ್ಮುಂದೆ ಕಡ್ಡಾಯವಾಗಿ ಅಶೋಕ ವೃತ್ತದ ಬಳಿಯಿರುವ ಎಪಿಎಂಸಿ ಮಾರುಕಟ್ಟೆಯ ಮುಖ್ಯ ಪ್ರಾಂಗಣದಲ್ಲಿಯೆ ವ್ಯಾಪಾರ&ವಹೀವಾಟು ನಡೆಸಬೇಕು.

ಎಪಿಎಂಸಿ ಕಾಯ್ದೆ ಉಲ್ಲಂಘಿಸಿ ಯಾರಾದರೂ ಅನಧಿಕೃತ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಪಿಎಂಸಿ ಕಾರ್ಯದರ್ಶಿ ಶೈಲಜಾ ಎಂ.ವಿ. ಎಚ್ಚರಿಕೆ ನೀಡಿದರು.

ಎಪಿಎಂಸಿ ಸಹಾಯಕ ಕಾರ್ಯದರ್ಶಿ ಪರಮೇಶ ನಾಯ್ಕ, ಪೊಲೀಸರು ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net