ಎಪಿಕೆ ಆ್ಯಪ್ ಕಳುಹಿಸಿ 1.55 ಲಕ್ಷ ರೂ. ವಂಚನೆ

Crime
Crime
Published on

ಹಾವೇರಿ: ವ್ಯಕ್ತಿಯೊಬ್ಬರ ಮೊಬೈಲ್ಗೆ ಎಪಿಕೆ ಆ್ಯಪ್ಅನ್ನು ಕಳುಹಿಸಿ ಮೊಬೈಲ್ ನಿಯಂತ್ರಣಕ್ಕೆ ತೆಗೆದುಕೊಂಡು 1.55 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿಯ ಸೈಬರ್ ಕೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸವಣೂರ ಪಟ್ಟಣದ ರಿಯಾಜಅಹ್ಮದ್ ಅಲ್ಲಾಭಕ್ಷ ಯಲವಿಗಿ (32) ಎಂಬುವರಿಗೆ ವಂಚಿಸಿರುವುದು.

ಇವರ ಮೊಬೈಲ್ಗೆ ಯಾರೋ ಅಪರಿಚಿತರು "ಆರ್ಟಿಒ ಚಲನ್' ಎಂಬ ಎಪಿಕೆ ಫೈಲ್ಅನ್ನು ಕಳುಹಿಸಿದ್ದು ಅದನ್ನು ರಿಯಾಜ ಓಪನ್ ಮಾಡಿದಾಗ ಅವರ ಮೊಬೈಲ್ನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡ ಖದೀಮರು 1.55 ಲಕ್ಷ ರೂ.ಅನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net