ಅಂಗನವಾಡಿ ಶಿಕ್ಷಕರಿಗೆ ಬಿಎಲ್ಒ ಕಾರ್ಯ ಬೇಡ

ಮನವಿ ಸಲ್ಲಿಕೆ
ಮನವಿ ಸಲ್ಲಿಕೆ
Published on

ರಾಣೆಬೆನ್ನೂರ: ಬಿಎಲ್ಒ ಕಾರ್ಯದಿಂದ ಅಂಗನವಾಡಿ ಶಿಕ್ಷಕರನ್ನು ಕೈಬಿಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಗುರುವಾರ ತಹಸೀಲ್ದಾರ್ ಆರ್.ಎಚ್. ಭಾಗವಾನ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಬಿಎಲ್ಒ ಕಾರ್ಯ ಇರುವುದರಿಂದ ಸರಿಯಾಗಿ ಮಕ್ಕಳಿಗೆ ಪಾಠ ಮಾಡಲು ಆಗುವುದಿಲ್ಲ. ಅಲ್ಲದೆ ಚುನಾವಣೆ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚಿನ ಕೆಲಸಗಳಿಗೆ ಹೊರಗಡೆ ನಿಯೋಜನೆ ಆಗುವುದರಿಂದ ಮಕ್ಕಳಿಗೆ ಬಹಳ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಕೂಡಲೇ ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್ಒ ಕರ್ತವ್ಯದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ನಾಗಮ್ಮ ದುರಗಣ್ಣನವರ, ಚಂದ್ರಮ್ಮ ಮೂಲಿಮನಿ, ರತ್ನಾ ಬಾನಿ, ರೇಣುಕಾ ಸಕ್ರಪ್ಪನವರ, ಅಭಿಲಾಷ ಅಂಗಡಿ, ಮಂಜುಳಾ ಚೌಡಿ, ಶೋಭಾ ಹನುಮರಡ್ಡೇರ, ಹೊನ್ನಮ್ಮ ಚಂದಾಪುರ, ಮಮತಾ ಸಾವಕ್ಕನವರ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net