Ancient statue ಪುರಾತನ ಬಸವಣ್ಣನ ಮೂರ್ತಿ ಪತ್ತೆ Ancient statue

ಹಿರೇಕೆರೂರ ತಾಲೂಕಿನ ದೂದಿಹಳ್ಳಿ ಗ್ರಾಮದ ಬಾಳೆಕಟ್ಟೆ ಕೆರೆಯಲ್ಲಿ ಪತ್ತೆಯಾದ ಕಲ್ಲಿನ ಬಸವಣ್ಣನ ಮೂರ್ತಿ (Ancient statue).
ಹಿರೇಕೆರೂರ ತಾಲೂಕಿನ ದೂದಿಹಳ್ಳಿ ಗ್ರಾಮದ ಬಾಳೆಕಟ್ಟೆ ಕೆರೆಯಲ್ಲಿ ಪತ್ತೆಯಾದ ಕಲ್ಲಿನ ಬಸವಣ್ಣನ ಮೂರ್ತಿ (Ancient statue).
Published on
ಹಿರೇಕೆರೂರ: ತಾಲೂಕಿನ ದೂದಿಹಳ್ಳಿ ಗ್ರಾಮದ ಬಾಳೆಕಟ್ಟೆ ಕೆರೆಯಲ್ಲಿ ಕಲ್ಲಿನ ಬಸವಣ್ಣನ (ನಂದಿ) ಪುರಾತನ ಮೂರ್ತಿ ಶನಿವಾರ ಪತ್ತೆಯಾಗಿದೆ.
ಗ್ರಾಮದ ಫಾಲಾಕ್ಷ ಕಾಯಕದ ಅವರು ತಮ್ಮ ಜಮೀನಿಗೆ ಹಾಕಲು ಲವತ್ತಾದ ಬಾಳೆಕಟ್ಟೆಯ ಕೆರೆ ಮಣ್ಣನ್ನು ಜೆಸಿಬಿ ಯಂತ್ರದ ಸಹಾಯದಿಂದ ಅಗೆಯುತ್ತಿರುವಾಗ ಮೂರು ಅಡಿ ಎತ್ತರ ಹಾಗೂ 4 ಅಡಿ ಉದ್ದವಿರುವ ಕಲ್ಲಿನ ಬಸವಣ್ಣನ ಮೂರ್ತಿ ಕಾಣಿಸಿಕೊಂಡಿದೆ. ಕೂಡಲೇ ಫಾಲಾಕ್ಷ ಅವರು ಜೆಸಿಬಿ ಚಾಲಕನಿಗೆ ಹೇಳಿ ಮೂತಿರ್ಯನ್ನು ಜಾಗ್ರತೆಯಿಂದ ಮಲೆಕ್ಕೆತ್ತಿಸಿದ್ದಾರೆ.
ವಿಜಯನಗರದ ಕಾಲದ ಎನ್ನಲಾಗುತ್ತಿರುವ ಈ ಮೂರ್ತಿ ಬಹುವಿಶೇಷತೆಯಿಂದ ಕೂಡಿದ್ದು, ನೋಡಲು ಬಹಳ ಸುಂದರವಾಗಿದೆ. ಅಷ್ಟೆ ನಾಜೂಕಾಗಿ ಕಲ್ಲಿನಲ್ಲಿ ಕೆತ್ತನೆ ಮಾಡಲಾಗಿದೆ. ಗ್ರಾಮಸ್ಥರು ಸೇರಿ ಬಸವಣ್ಣನಿಗೆ ಸ್ಥಳದಲ್ಲಿ ಅಭಿಷೇಕ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮೆರವಣಿಗೆ ಮೂಲಕ ತೆಗೆದುಕೊಂಡು ಬಂದು ಗ್ರಾಮದ ಕಲ್ಲೇಶ್ವರ ದೇವಸ್ಥಾನದಲ್ಲಿ ತಂದಿರಿಸಿದ್ದಾರೆ. ಈ ವಿಷಯ ತಿಳಿದು ಮೂತಿರ್ಯನ್ನು ನೋಡಲು ಗ್ರಾಮ ಸೇರಿದಂತೆ ಹಿರೇಕೆರೂರಿನ ಜನತೆ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.
ಮೂರ್ತಿ ಪತ್ತೆಯಾದ ಕುರಿತು ಈಗಾಗಲೇ ಧಾರವಾಡ ಪುರಾತತ್ವ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅಲ್ಲಿನ ತಜ್ಞರು ಬಂದು ಮೂರ್ತಿಪರಿಶೀಲಿಸಿದ ನಂತರವೇ ಅದರ ಕಾಲ ಹಾಗೂ ಮತ್ತಿತರರ ಮಾಹಿತಿಗಳು ಲಭ್ಯವಾಗಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net