

ಹಾವೇರಿ: 108 ಆಂಬುಲೆನ್ಸ್ ನಲ್ಲಿದ್ದ 5 ಲಕ್ಷ ರೂ.ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಕಳ್ಳತನ ಮಾಡಿದ ಆರೋಪಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಬಸವರಾಜ ನಾಗಪ್ಪ ಹುಲಿಹಳ್ಳಿ (31) ಬಂಧಿತ ಆರೋಪಿ.
ಈತ ಜ. 22ರಂದು ರಟ್ಟಿಹಳ್ಳಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಿಂತಿದ್ದ ಆಂಬುಲೆನ್ಸ್ ಬಾಗಿಲು ಮುರಿದು ವೆಂಟಿಲೇಟರ್, ಮಾನಿಟರ್, ಇನ್ಸೂಜಿನ್ ಸಿರೇಂಜ್ ಪಂಪ್ ಸೇರಿ 5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದ. ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.